ಬೆಂಗಳೂರು : ಇತ್ತೀಚೆಗೆ ಅಪ್ರಾಪ್ತೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನಲ್ಲಿ 16 ವರ್ಷದ ಅಪ್ರಾಪ್ತೆ ಬಾಲಕಿ ಒಬ್ಬಳು ಸೋದರ ಮಾವನಿಂದಲೇ ಗರ್ಭಿಣಿಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ.
ಹೌದು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಾಲಕಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಸಮಯಕ್ಕೆ ಸರಿಯಾಗಿ ಮುಟ್ಟು ಆಗುತ್ತಿರಲಿಲ್ಲ. ಹೀಗಾಗಿ ಮಗಳನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಬಾಲಕಿಯನ್ನ ತಪಾಸಣೆ ಮಾಡಿದ ವೈದ್ಯೆ ಡಾ.ಸೋನಿಯಾ ಅವರು ಮಗಳು ಗರ್ಭಿಣಿಯಾಗಿರುವುದು ಹೇಳಿದ್ದಾರೆ. ವಿಷಯ ತಿಳಿದ ಬಾಲಕಿಯ ತಾಯಿಗೆ ಅಘಾತವಾಗಿದೆ.
ಈ ಕುರಿತು ಬಾಲಕನು ವಿಚಾರಿಸಿದಾಗ ಸೆಪ್ಟೆಂಬರ್ ನಲ್ಲಿ ಸೋದರಮಾವ ಮನೆಗೆ ಬಂದಿದ್ದು ಬಲವಂತವಾಗಿ ಅತ್ಯಾಚಾರ ಎಸಿಗಿದ್ದಾನೆ ಎಂಬ ವಿಷಯ ಬೇರಂಗವಾಗಿದೆ ಕೂಡಲೇ ಬಾಲಕಿಯ ತಾಯಿಯು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಸದ್ಯ ನೆಲಮಂಗಲ ಪೊಲೀಸರಿಂದ 30 ವರ್ಷದ ಸೋದರ ಮಾವನನ್ನು ಬಂಧಿಸಲಾಗಿದೆ. ಬಾಲಕಿ ತಾಯಿ ದೂರಿನ ಆಧಾರದ ಮೇಲೆ ನೆಲಮಂಗಲ ಟೌನ್ ಠಾಣೆಯಲ್ಲಿ ಬಿಎನ್ಎಸ್ ಜೊತೆಗೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.