ಬೆಳಗಾವಿ : ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (BMLTA) ಮಸೂದೆಯನ್ನು ಕರ್ನಾಟಕ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.
ಈ ಮಸೂದೆ ಅಂಗೀಕಾರದೊಂದಿಗೆ, ಆಟೋರಿಕ್ಷಾದಿಂದ ಸಿಟಿ ಬಸ್ ಗಳು ಮತ್ತು ಮೆಟ್ರೋ ರೈಲುಗಳವರೆಗೆ ಸಾರ್ವಜನಿಕ ಸಾರಿಗೆ ಸೇವೆಗಳು ಬಿಎಂಎಲ್ಟಿಎ ಅಡಿಯಲ್ಲಿ ಬರುತ್ತವೆ.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ್ದ ವಿಧೇಯಕವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಪರ್ಯಾಲೋಚನೆಗೆ ಹಾಕಿ ವಿಧೇಯಕ ಧ್ವನಿಮತದ ಮೂಲಕ ಸರ್ವಾನುಮತದ ಅಂಗೀಕಾರಗೊಂಡಿತು.
ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಭೂಸಾರಿಗೆ ಸಂಚಾರದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ,ಹಲವು ಮಾದರಿಗಳ ಪ್ರಾಧಿಕಾರ ,ಇಲಾಖೆಗಳ ಬದಲಾಗಿ ಉನ್ನತಾಧಿಕಾರದ ಒಂದೇ ಸಂಸ್ಥೆ ಸ್ಥಾಪಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ನಗರವು ಯೋಜಿತ ರೀತಿಯಲ್ಲಿ ಬೆಳೆಯಲಿಲ್ಲ, ಆದರೆ ಯೋಜನೆ ಮತ್ತೊಂದೆಡೆ ಇದೆ ಎಂದು ಹೇಳಿದರು.”ರಸ್ತೆಗಳು ಅಗಲೀಕರಣಗೊಂಡಿಲ್ಲ, ಆದರೆ ಪ್ರತಿದಿನ 5,000 ಹೊಸ ವಾಹನಗಳು ನಗರಕ್ಕೆ ಸೇರ್ಪಡೆಯಾಗುತ್ತವೆ. ನಗರವು 1.3 ಕೋಟಿ ಜನರನ್ನು ಹೊಂದಿದೆ ಆದರೆ ಶೀಘ್ರದಲ್ಲೇ ವಾಹನಗಳ ಸಂಖ್ಯೆನಗರದ ಜನಸಂಖ್ಯೆಯನ್ನು ಹಿಂದಿಕ್ಕಲಿದೆ ” ಎಂದು ಬೊಮ್ಮಾಯಿ ಹೇಳಿದರು.
ಇವುಗಳ ನಿರ್ವಹಣೆಯನ್ನು ಬಹು ವಿಧದ ಸಂಸ್ಥೆಗಳು ನೋಡಿಕೊಳ್ಳುತ್ತಿವೆ. ಹೊಸ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಕಾರ್ಯದ ಜವಾಬ್ದಾರಿ ಹಾಗೂ ಸಮಗ್ರ ಪರಿಹಾರ ಕಂಡುಕೊಳ್ಳಲು ವಿಧೇಯಕ ತರಲಾಗುತ್ತಿದೆ ಎಂದು ಅವರು ಹೇಳಿದರು.
BIGG NEWS : ನಾಡಿದ್ದು ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವರ ಆಗಮನ : ರಾಜ್ಯದಲ್ಲಿ ಮೂರು ದಿನ ‘ಅಮಿತ್ ಷಾ’ ಸಂಚಲನ
BREAKING NEWS : ಹಾವೇರಿಯಲ್ಲಿ ಭೀಕರ ಅಪಘಾತ : ಕಾರಿಗೆ ಬಸ್ ಡಿಕ್ಕಿಯಾಗಿ ದಂಪತಿ ದುರ್ಮರಣ