Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಏರ್‌ಪೋರ್ಟ್‌ನಲ್ಲಿ ಬೋರ್ಡಿಂಗ್ ಪಾಸ್ ಕಳೆದುಕೊಂಡರೆ ಏನಾಗುತ್ತೆ? ನೀವು ತಿಳಿದಿರಲೇಬೇಕಾದ ಪ್ರಮುಖ ನಿಯಮಗಳು

27/02/2026 9:50 AM

BIG NEWS : `ಬ್ರೇಕಪ್’ ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

27/02/2026 9:48 AM

ಅಮೆರಿಕ ಜೈಲಿನಲ್ಲಿದ್ದ ಭಾರತೀಯರಿಗೆ ಬಿಗ್ ರಿಲೀಫ್: ಇಮ್ಮಿಗ್ರೇಷನ್ ಬಂಧನದಲ್ಲಿದ್ದವರಿಗೆ ‘ಬಾಂಡ್ ಮುಕ್ತಿ’ ನೀಡಿದ ಅಮೆರಿಕ ಕೋರ್ಟ್!

27/02/2026 9:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ಡಿ.31ರಂದು ಬೆಂಗಳೂರಲ್ಲಿ ಮುಂಜಾನೆ 2.40ರವರೆಗೆ ‘ಮೆಟ್ರೋ ರೈಲು ಸಂಚಾರ’ ವಿಸ್ತರಣೆ | Namma Metro
KARNATAKA

GOOD NEWS: ಡಿ.31ರಂದು ಬೆಂಗಳೂರಲ್ಲಿ ಮುಂಜಾನೆ 2.40ರವರೆಗೆ ‘ಮೆಟ್ರೋ ರೈಲು ಸಂಚಾರ’ ವಿಸ್ತರಣೆ | Namma Metro

By kannadanewsnow0928/12/2024 5:44 AM

ಬೆಂಗಳೂರು: ನಗರದಲ್ಲಿ ಡಿಸೆಂಬರ್.31ರಂದು ಮುಂಜಾನೆ 2.40ರವರೆಗೆ ನಮ್ಮ ಮೆಟ್ರೋ ಸಂಚಾರದ ( Namma Metro Train Service ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಮೂಲಕ ಹೊಸ ವರ್ಷಾಚರಣೆಯಲ್ಲಿ ತೊಡಗೋರಿಗೆ ಗುಡ್ ನ್ಯೂಸ್ ನೀಡಲಾಗಿದೆ.

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ( Bangalore Metro Rail Corporation Limited-BMRCL ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025ರ ಹೊಸ ವರ್ಷದ ಮುನ್ನಾದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸುತ್ತಿದೆ. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತವೆ ಎಂದಿದೆ.

ರೈಲುಗಳು 31 ಡಿಸೆಂಬರ್ 2024ರ ರಾತ್ರಿ 11.00 ರಿಂದ ದಿನದ ವಿಸ್ತೃತ ಸೇವಾ ಅವಧಿಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಡಿಸೆಂಬರ್ 31, 2024 ರಂದು ರಾತ್ರಿ 11:00 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ರೈಲುಗಳು ನಿಲ್ಲುತ್ತವೆ.

ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಗಮ್ಯಸ್ಥಾನಕ್ಕೆ ರಾತ್ರಿ 11:00 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು ₹ 50 ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ಬಳಸಲು ಸೂಚಿಸಲಾಗಿದೆ. ಈ ಕಾಗದದ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 31ನೇ ಡಿಸೆಂಬರ್ 2024ರ ಬೆಳಗ್ಗೆ 8:00 ರಿಂದ ಮುಂಗಡವಾಗಿ ಖರೀದಿಸಲು ಲಭ್ಯವಿರುತ್ತದೆ. ಸಾಮಾನ್ಯ QR ಕೋಡ್ ಟಿಕೆಟ್‌ಗಳು ಮತ್ತು ಕಾರ್ಡ್‌ಗಳು ಈ ನಿಲ್ದಾಣಗಳಿಂದ ಪ್ರಯಾಣಿಸಲು ಸಹ ಮಾನ್ಯವಾಗಿರುತ್ತವೆ.

ಯಾವುದೇ ನಿರ್ದಿಷ್ಟ ನಿಲ್ದಾಣದಲ್ಲಿ ಜನಸಂದಣಿಯನ್ನು ತಪ್ಪಿಸಲು, ಪ್ರಯಾಣಿಕರು ವೈಟ್‌ಫೀಲ್ಡ್ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಹೋಗುವವರು ಪ್ರಯಾಣಕ್ಕಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬಹುದು ಮತ್ತು ಚಲ್ಲಘಟ್ಟ ಹಾಗೂ ಮಾದಾವರ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಿಕೊಳ್ಳಬಹುದು. ನಿಗಮವು ಸಾರ್ವಜನಿಕರು ತಮ್ಮ ಪ್ರಯಾಣವನ್ನು ತಮಗೆ ಅನುಗುಣವಾಗಿ ಯೋಜಿಸಲು ಮತ್ತು ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕಾಗಿ ನಿಮ್ಮ ಸಹಕಾರವನ್ನು ನೀಡುವಂತೆ ಕೋರಿದೆ.

Share. Facebook Twitter LinkedIn WhatsApp Email

Related Posts

ರೈತರ ಗಮನಕ್ಕೆ: ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಲು ಸೆಂಟ್ರಲ್ ಐಡಿ, ಇ-ಕೆವೈಸಿ ಕಡ್ಡಾಯ !

27/02/2026 9:28 AM1 Min Read

ಉದ್ಯೋಗ ಸಿಗುತ್ತಿಲ್ಲವೇ? ಚಿಂತೆ ಬಿಡಿ: ಕೈತುಂಬಾ ಲಾಭ ತರುವ 7 ಭರ್ಜರಿ ಬ್ಯುಸಿನೆಸ್ ಐಡಿಯಾಗಳು ಇಲ್ಲಿವೆ!

27/02/2026 9:16 AM2 Mins Read

SHOCKING : ಮೇಕೆಯನ್ನು ನುಂಗಿದ ಬೃಹತ್ ಹೆಬ್ಬಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

27/02/2026 9:07 AM1 Min Read
Recent News

ಏರ್‌ಪೋರ್ಟ್‌ನಲ್ಲಿ ಬೋರ್ಡಿಂಗ್ ಪಾಸ್ ಕಳೆದುಕೊಂಡರೆ ಏನಾಗುತ್ತೆ? ನೀವು ತಿಳಿದಿರಲೇಬೇಕಾದ ಪ್ರಮುಖ ನಿಯಮಗಳು

27/02/2026 9:50 AM

BIG NEWS : `ಬ್ರೇಕಪ್’ ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

27/02/2026 9:48 AM

ಅಮೆರಿಕ ಜೈಲಿನಲ್ಲಿದ್ದ ಭಾರತೀಯರಿಗೆ ಬಿಗ್ ರಿಲೀಫ್: ಇಮ್ಮಿಗ್ರೇಷನ್ ಬಂಧನದಲ್ಲಿದ್ದವರಿಗೆ ‘ಬಾಂಡ್ ಮುಕ್ತಿ’ ನೀಡಿದ ಅಮೆರಿಕ ಕೋರ್ಟ್!

27/02/2026 9:31 AM

ರೈತರ ಗಮನಕ್ಕೆ: ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಲು ಸೆಂಟ್ರಲ್ ಐಡಿ, ಇ-ಕೆವೈಸಿ ಕಡ್ಡಾಯ !

27/02/2026 9:28 AM
State News
KARNATAKA

ರೈತರ ಗಮನಕ್ಕೆ: ಕೇಂದ್ರ ಸರ್ಕಾರದ ಸೌಲಭ್ಯ ಪಡೆಯಲು ಸೆಂಟ್ರಲ್ ಐಡಿ, ಇ-ಕೆವೈಸಿ ಕಡ್ಡಾಯ !

By kannadanewsnow5727/02/2026 9:28 AM KARNATAKA 1 Min Read

ಕೇಂದ್ರ ಸರ್ಕಾರದ ವಿವಿಧ ಜನಪದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಈಗ ಪ್ರತಿಯೊಬ್ಬ ರೈತರಿಗೂ ‘ಪ್ರತ್ಯೇಕ ಗುರುತಿನ…

ಉದ್ಯೋಗ ಸಿಗುತ್ತಿಲ್ಲವೇ? ಚಿಂತೆ ಬಿಡಿ: ಕೈತುಂಬಾ ಲಾಭ ತರುವ 7 ಭರ್ಜರಿ ಬ್ಯುಸಿನೆಸ್ ಐಡಿಯಾಗಳು ಇಲ್ಲಿವೆ!

27/02/2026 9:16 AM

SHOCKING : ಮೇಕೆಯನ್ನು ನುಂಗಿದ ಬೃಹತ್ ಹೆಬ್ಬಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

27/02/2026 9:07 AM

Business Idea : ಕಸದಿಂದ ರಸ : ತೆಂಗಿನ ಚಿಪ್ಪಿನ ಉದ್ಯಮದ ಮೂಲಕ ತಿಂಗಳಿಗೆ ಲಕ್ಷಾಂತರ ರೂ. ಆದಾಯ ಗಳಿಸಿ !

27/02/2026 8:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.