ಬೆಂಗಳೂರು : ಬಾರ್ ನಲ್ಲಿ ಕುಡಿಯುತ್ತಿದ್ದ ವೇಳೆ ಕೇವಲ ಗುರಾಯಿಸಿದ್ದಕ್ಕೆ ವ್ಯಕ್ತಿಯ ಮೇಲೆ ನಾಲ್ಕು ಜನ ದುಷ್ಕರ್ಮಿಗಳು ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಹರ್ಷ (33) ಎಂದು ಹೇಳಲಾಗುತ್ತಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಗುಲ್ಬರ್ಗ ಮೂಲದ ಹರ್ಷ ಬಾರೋಂದಕ್ಕೆ ಕುಡಿಯಲು ಬಂದಾಗ ಈ ದುರ್ಘಟನೆ ನಡೆದಿದೆ, ಇಂದು ಸಂಜೆ 7 ಗಂಟೆಗೆ ಸುಮಾರಿಗೆ ಮೃತ ಹರ್ಷ ಕುಡಿಯಲು ಕಲ್ಕೆರೆ ಗೇಟ್ ನಲ್ಲಿರುವ SKR ಬಾರ್‌ಗೆ ಹೋಗಿದ್ದಾನೆ, ಕುಡಿಯುತ್ತಾ ಪಕ್ಕದ ಟೇಬಲ್ ಜೋರಾಗಿ ಮಾತಾನಾಡುತ್ತಿದ್ದವರ ಕಡೇಗೆ ತಿರುಗಿ ನೋಡಿದ್ದಾನೆ.
ಕುಡಿದ ಮತ್ತಿನಲ್ಲಿ ಯುವಕರು ಏನೋ ಗುರಾಯಿಸ್ತಾ ಇದೀಯಾ ಎಂದು ಜಗಳ ಆರಂಭಿಸಿದ್ದಾರೆ. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಬಿಯರ್ ಬಾಟಲ್ ನಿಂದ ತಲೆಗೆ ಹೊಡೆದು ನಂತರ ಹೊಟ್ಟೆಗೆ ಚುಚ್ಚಿದ್ದಾರೆ ಹೊಡೆತ ತಿಂದ ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಮೋಹನ್ ಕುಮಾರ್ ಬನ್ನೇರುಘಟ್ಟ ಇನ್ಸ್ ಪೆಕ್ಟರ್ ಕುಷ್ಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.