ಬೆಂಗಳೂರು: ನಗರದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆ ಪತ್ತೆಯಾಗಿ ಅಚ್ಚರಿಯನ್ನು ಹುಟ್ಟಿಸಿತ್ತು. ಇದೀಗ ಕಸದ ರಾಶಿಯಲ್ಲಿ ಮನುಷ್ಯನ ಮೂಳೆ ಪತ್ತೆ ಹಿಂದಿನ ಸ್ಪೋಟಕ ರಹಸ್ಯ ಬಯಲಾಗಿದೆ. ಅದೇನು ಅಂತ ಮುಂದೆ ಓದಿ.
ಬೆಂಗಳೂರಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆ ಪತ್ತೆ ಕೇಸ್ ಗೆ ಸಂಬಂಧಿಸಿದಂತೆ ರಹಸ್ಯ ಬಯಲಾಗಿದೆ. ಮೆಡಿಕಲ್ ಓದುತ್ತಿದ್ದಂತ ವಿದ್ಯಾರ್ಥಿನಿ ತಂದೆಯ ಎಡವಟ್ಟು ಇದಕ್ಕೆ ಕಾರಣ ಎಂಬುದು ತಿಳಿದು ಬಂದಿದೆ.
ಮಡಿಕಲ್ ವ್ಯಾಸಂಗಕ್ಕಾಗಿ ಮಗಳು ಮನೆಗೆ ತಂದಿಟ್ಟಿದ್ದಂತ ಮೂಳೆಗಳು ಅವುಗಳಾಗಿವೆ. ಮಗಳು ವಿದ್ಯಾಭ್ಯಾಸಕ್ಕಾಗಿ ತಂದಿಟ್ಟಿದ್ದಂತ ಮೂಳೆಗಳು ಅವಶ್ಯಕತೆ ಇಲ್ಲದೆ ಕೆಲ ದಿನಗಳಇಂದ ಮನೆಯಲ್ಲೇ ಇಟ್ಟಿದ್ದರು. ಗೌರಿ ಹಬ್ಬ ಹಿನ್ನಲೆಯಲ್ಲಿ ಕಸದ ರಾಶಿಯಲ್ಲಿ ಮೂಳೆಗಳ್ನು ಎಸೆದಿದ್ದರು. ಇಂದು ಕಸದ ರಾಶಿಗೆ ಮೂಳೆಗಳನ್ನು ವಿದ್ಯಾರ್ಥಿ ತಂದೆ ಎಸೆದು ಹೋಗಿದ್ದರು.
ಕಸದ ರಾಶಿಯಲ್ಲಿ ಮನುಷ್ಯರ ಮೂಳೆಗಳನ್ನು ಕಂಡು ಜನರು ಆತಂಕಗೊಂಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಂತ ವಿದ್ಯಾರ್ಥಿನಿಯ ತಂದೆ ತಪ್ಪೊಪ್ಪಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಕಸದ ರಾಶಿಯಲ್ಲಿ ಪತ್ತೆಯಾದಂತ ಮನುಷ್ಯರ ಮೂಳೆ ಹಿಂದಿನ ರಹಸ್ಯ ಬಯಲಾಗಿದೆ.