ಬೆಂಗಳೂರು : ಷೇರು ವ್ಯವಹಾರದಲ್ಲಿ ಹಣ ತೊಡಗಿಸಿ, ದುಪ್ಪಟ್ಟು ಲಾಭ ಗಳಿಸಿ ಎಂಬ ಸಂದೇಶವನ್ನು ನಂಬಿದ್ದ ವ್ಯಕ್ತಿಯೊಬ್ಬರು ಒಡವೆ ಎಲ್ಲ ಮಾರಿ ಸಾಲ ಮಾಡಿ ಒಟ್ಟು 5.18 ಕೋಟಿ ರೂಪಾಯಿ ಕಳೆದುಕೊಂಡು ಮೋಸ ಹೋಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ದೂರುದಾರ ಖಾತೆ ತೆರೆಯುತ್ತಿದ್ದಂತೆ ಆರೋಪಿಗಳು ಮತ್ತೊಂದು ಸಂದೇಶ ಕಳುಹಿಸಿದ್ದರು. ದುಪ್ಪಟ್ಟು ಲಾಭ ನೀಡುವ ಷೇರುಗಳನ್ನು ಖರೀದಿಸುವಂತೆ ಸಲಹೆ ನೀಡಿದ್ದರು. ಅದನ್ನು ನಂಬಿದ್ದ ದೂರುದಾರ, ಆರಂಭದಲ್ಲಿ ಕೆಲ ಷೇರುಗಳನ್ನು ಖರೀದಿಸಿದ್ದರು. ಕೆಲ ದಿನಗಳ ನಂತರ ಯಾವುದೇ ಲಾಭ ಬಂದಿರಲಿಲ್ಲ.
ಲಾಭದ ಬಗ್ಗೆ ಪ್ರಶ್ನಿಸಿದಾಗ ಮತ್ತಷ್ಟು ಷೇರುಗಳನ್ನು ಖರೀದಿಸುವಂತೆ ಆರೋಪಿಗಳು ಹೇಳಿದ್ದರು. ಅದನ್ನೂ ನಂಬಿ, ಪುನಃ ಷೇರು ಖರೀದಿಸಿದ್ದರು. ಅವಾಗಲೂ ಲಾಭ ಬಂದಿರಲಿಲ್ಲ. ಒಂದೇ ಬಾರಿಗೆ ಷೇರಿನ ಮೊತ್ತ ಹಾಗೂ ಲಾಭದ ಹಣ ವಾಪಸು ನೀಡುವುದಾಗಿ ಹೇಳಿದ್ದ ಆರೋಪಿಗಳು, ಪುನಃ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ಇದಾದ ನಂತರ ದೂರುದಾರ, ಹಂತ ಹಂತವಾಗಿ ₹5.18 ಕೋಟಿ ಕಟ್ಟಿದ್ದರು. ಆರೋಪಿಗಳು, ಪುನಃ ಹಣ ಕೇಳಿದಾಗ ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದಾರೆಎಂದು ಮೂಲಗಳು ಹೇಳಿವೆ.
ದೂರುದಾರ, ಹೆಚ್ಚಿನ ಲಾಭ ಪಡೆಯುವ ಆಸೆಗಾಗಿ ಹಣ ಕಳೆದುಕೊಂಡಿದ್ದಾರೆ. ಚಿನ್ನಾಭರಣ ಮಾರಿ ಹಾಗೂ ಸಾಲ ಮಾಡಿ ಹಣ ನೀಡಿರುವ ಮಾಹಿತಿ ಇದೆ.ಹಾಗಾಗಿ ನಗರದ ನಿವಾಸಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.