ಬೆಂಗಳೂರು: ನಿನ್ನೆ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಮತ್ತೆ ಇಡೀ ಬೆಂಗಳೂರು ನಲುಗಿ ಹೋಗಿದೆ. ಸಂಜೆ ಬಂದ ಮಹಾಮಳೆಗೆ ಐಟಿಬಿಟಿ ಸಿಟಿ ತತ್ತರಿಸಿ ಹೋಗಿದೆ.
ಹಲವಡೆ ರಸ್ತೆಗಳು , ಮನೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬಸ್ಥರು ಹೈರಾಣಾಗಿದ್ದಾರೆ. ಅಂಡರ್ ಪಾಸ್ ಗಳು ಮೆಟ್ರೋ ಬೇಲಿ ಕುಸಿದುಬಿದ್ದಿದೆ.
ಇತ್ತ ಶಿವಾನಂದ ಸರ್ಕಲ್ ಅಂಡರ್ ಪಾಸ್ ನಲ್ಲಿ ರಾತ್ರಿ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ಅಂಡರ್ ಪಾಸ್ ನಲ್ಲಿ ನೀರು ನಿಂತು ನದಿಯಂತಾಗಿದೆ. ಹೀಗಾಗಿ ಬೆಳಗ್ಗೆ ವ್ಯಕ್ತಿಯೊಬ್ಬರು ಮಗಳನ್ನು ಶಾಲೆಗೆ ಕರೆತರುತ್ತಿದ್ದ ವೇಳೆ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ವ್ಯಕ್ತಿಗೆ ಗಾಯವಾಗಿದೆ. ಮಳೆಗೆ ಟಾರ್ ಗಳೆಲ್ಲ ಕಿತ್ತು ಹೋಗಿದೆ. ಇದರಿಂದಾಗಿ ಅಂಡರ್ ಪಾಸ್ ನಲ್ಲಿ ಪ್ರವಾಹ ಭೀತಿ ಎದುರಾಗಿದೆ.