ಬೆಂಗಳೂರು : ಮಹಿಳೆಗೆ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಲವ್ ಮಾಡಿ ನಂತರ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, 41 ಲಕ್ಷ ಹಣ 5 ಲಕ್ಷ ಮೌಲ್ಯದ ಎಲ್ಐಸಿ ಬಾಂಡ್ ಕಿತ್ತುಕೊಂಡು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಮಹಿಳೆಯರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಹೌದು ಚಿಕ್ಕಬಾಣಾವರದ ವಿಶ್ವನಾಥ್ ಅಲಿಯಾಸ್ ವಿಷ್ಣುಗೌಡ ವಿರುದ್ಧ ಮಹಿಳೆ ಇದೀಗ ದೂರು ದಾಖಲಿಸಿದ್ದಾಳೆ. ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವುದಾಗಿ ವಿಶ್ವನಾಥ್ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಚೆಕ್ ಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಅಷ್ಟಕ್ಕೇ ಸುಮ್ಮನಾಗದೇ ಮನೆಗೆ ನುಗ್ಗಿ ಮಹಿಳೆಯ ತಂದೆ ತಾಯಿಯ ಮೇಲೆ ವಿಶ್ವನಾಥ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತ ಮಹಿಳೆಯ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ವಿಶ್ವನಾಥ ವಿಕೃತಿ ಮೆರೆದಿದ್ದಾನೆ. ತನ್ನನ್ನು ದೈಹಿಕವಾಗಿ ಬಳಸಿಕೊಂಡು ವಂಚನೆ ಮಾಡಿರುವುದಾಗಿ ದೂರು ಸಲ್ಲಿಸಲಾಗಿದೆ. ವಿಶ್ವನಾಥ್ ಅಲಿಯಾಸ್ ವಿಷ್ಣು ಗೌಡ ವಿರುದ್ಧ 40 ವರ್ಷದ ಮಹಿಳೆ ದೂರು ಸಲ್ಲಿಸಿದ್ದಾರೆ. ಮಹಿಳೆ ದೂರಿನ ಅನ್ವಯ ಸೋಲದೇವನಹಳ್ಳಿ ಠಾಣೆಯಲ್ಲಿ ಇದೀಗ ಕೇಸ್ ದಾಖಲಾಗಿದೆ.