ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್ ಅಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಕಾಮುಕರ ಕಾಟ ಹೆಚ್ಚಾಗಿದ್ದು ಇದೀಗ ಮಹಿಳೆಯ ಖಾಸಗಿ ಭಾಗದ ಫೋಟೋ ತೆಗೆಯಲು ಹೊಂಚು ಹಾಕುತ್ತಿದ್ದ ಪುಂಡನನ್ನು ಸಾರ್ವಜನಿಕರು ರೆಡ್‌ಹ್ಯಾಂಡೆಡ್ ಆಗಿ ಹಿಡಿದು ಥಳಿಸಿದ್ದಾರೆ.
ಹೌದು ಬೆಂಗಳೂರಿನ ಹೃದಯಭಾಗವಾದ ಟೌನ್ಹಾಲ್ ಬಳಿ ಈ ಒಂದು ಘಟನೆ ನಡೆದಿದ್ದು, ಮಹಿಳೆಯರನ್ನು ಚುಡಾಯಿಸುತ್ತಾ, ಅವರ ಫೋಟೋಗಳನ್ನು ತೆಗೆಯುತ್ತಿದ್ದ ಬೀದಿ ಕಾಮುಕನನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಹಿಳೆಯ ಖಾಸಗಿ ಫೋಟೋಗಳನ್ನು ತೆಗೆಯುತ್ತಿದ್ದಾಗ ಈತ ಸಿಕ್ಕಿಬಿದ್ದಿದ್ದಾನೆ. ಮಹಿಳಾ ಹೋಂಗಾರ್ಡ್ ಸೇರಿದಂತೆ ಸಾರ್ವಜನಿಕರು ಸೇರಿ ಕಾಮುಕನನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ.
ಕಾಮುಕನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ನೂರಾರು ಅಶ್ಲೀಲ ಫೋಟೋಗಳು ಇರುವುದನ್ನು ಕಂಡು ಜನರು ಬೆಚ್ಚಿಬಿದ್ದರು. ಟೌನ್ ಹಾಲ್‌ನಿಂದ ಕೆ.ಆರ್ ಮಾರ್ಕೆಟ್‌ಗೆ ಹೋಗುವ ರಸ್ತೆಯ ಅಂಡರ್ ಪಾಸ್ ಸಬ್ ವೇನಲ್ಲಿ ಕೂತು ಈತ ಹುಡುಗಿಯರ ಫೋಟೋಗಳನ್ನು ತೆಗೆಯುತ್ತಿದ್ದ ಎಂದು ತಿಳಿದುಬಂದಿದ್ದು, ಈತನನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಇಬ್ಬರು ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕನೊಬ್ಬ ಯುವತಿಯರ ಮೇಲೆ ಬಿದ್ದು ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ. ಬಳಿಕ ಆತನನ್ನು ಪೊಲೀಸರು ತಮಿಳುನಾಡಿನಲ್ಲಿ ಅರೆಸ್ಟ್ ಮಾಡಿದ್ದರು. ಇದೀಗ ಇಂದು ಮತ್ತೊಂದು ಘಟನೆ ನಡೆದಿದ್ದು, ಸಾರ್ವಜನಿಕರೇ ಆತನಿಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.