ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಪುಂಡು ಪೋಕರಿಗಳ ಜೊತೆಗೆ ಕಾಮುಕರ ಅಟ್ಟಹಾಸ ಕೂಡ ಮಿತಿ ಮೀರಿದೆ. ಇದೀಗ ಕಾಲೇಜು ಹುಡಿಗಿಯರು ಪಾದಚಾರಿ ರಸ್ತೆಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಪಾಪಿಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಹೌದು ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಬಳಿ ಸ್ಕೂಟರ್ನಲ್ಲಿ ಹೋಗುವಾಗ ಕಾಲೇಜು ಹುಡುಗಿಯರು ಪಾದಾಚಾರಿ ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ಅಯೂಬ್ ಉರ್ ರೆಹೆಮಾನ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ವಿವಿಪುರಂ ಪೊಲೀಸರು, 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಮರ್ಮಾಂಗ ತೋರಿಸುತ್ತಿದ್ದ ವ್ಯಕ್ತಿ ಯುವಕನಲ್ಲ, ಈತ ಅಯೂಬ್ ಉರ್ ರೆಹಮಾನ್ ಎಂಬ 48 ವರ್ಷದ ಅಂಕಲ್. ತನಗೆ ಮಕ್ಕಳ ವಯಸ್ಸಿನ ವಿದ್ಯಾರ್ಥಿನಿಯರ ಮುಂದೆ ಹೀಓಗೆ ಅಶ್ಲೀಲವಾಗು ನಡೆದುಕೊಂಡಿದ್ದಾರೆ.
ಸ್ಕೂಟರ್ನಲ್ಲಿ ಹೋಗುವಾಗ ಕಾಲೇಜು ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದನು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸ್ಕೂಟರ್ನಲ್ಲಿ ಹೋಗುತ್ತಿದ್ದ ಈ ವ್ಯಕ್ತಿ ಯುವತಿಯರು ಹೆಚ್ಚಾಗಿರುವ ಕಾಲೇಜು ಟಾರ್ಗೆಟ್ ಮಾಡಿಕೊಂಡು ಅಲ್ಲಿಗೆ ಹೋಗಿ ಈ ರೀತಿ ವಿಕೃತ ವರ್ತನೆ ತೋರುತ್ತಿದ್ದನು. ಬೆಂಗಳೂರಿನಲ್ಲಿ ಮಹಿಳಾ ಕಾಲೇಜುಗಳ ಬಳಿ ಹೋಗಿ ಹೆಚ್ಚಾಗಿ ವಿದ್ಯಾರ್ಥಿನಿಯರು ಓಡಾಡುವ ಸ್ಥಳಗಳನ್ನು ಟಾರ್ಗೆಟ್ ಮಾಡಿ ಅಲ್ಲಿ ತನ್ನ ಸ್ಕೂಟರ್ ನಿಲ್ಲಿಸುತ್ತಿದ್ದನು.
ಇನ್ನು ಬಂಧಿತ ಆರೋಪಿ ಅಯೂಬ್ ಉರ್ ರೆಹೆಮಾನ್ ಕಲಾಸಿಪಾಳ್ಯದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದಾನೆ. ಆಗಾಗ ಬೈಕ್ ನಲ್ಲಿ ಬಂದು ಅಸಭ್ಯ ವರ್ತನೆ ಮಾಡಿ ಎಸ್ಕೇಪ್ ಆಗುತ್ತಿದ್ದನು. ಇನ್ನು ಪೊಲೀಸರು ಬಂಧಿಸಿ ಹೀಗೆಲ್ಲಾ ಮಾಡುತ್ತಿದ್ದಕ್ಕೆ ಕಾರಣವೇನು ಎಂದು ಕೇಳಿದರೆ, ನಾನು ಏನ್ ಮಾಡಿದ್ನೋ ನಂಗೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದಾನೆ. ಸದ್ಯ ವಿವಿ ಪುರಂ ಪೊಲೀಸರಿಂದ ಆರೋಪಿ ಅಯೂಬ್ನನ್ನು ವಿಚಾರಣೆ ಮಾಡಲಾಗುತ್ತಿದೆ.