ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ವಿಕೃತಕಾಮಿ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ತಾಯಿ ಮಗಳು ಸ್ನಾನ ಮಾಡುವ ವಿಡಿಯೋ ಮಾಡುತ್ತಿದ್ದ ಆರೋಪಿ ಮೊಯೀನುದ್ದಿನ್ ಎಂಬ ಆರೋಪಿಯನ್ನು ಇದೀಗ ಪೊಲೀಸ್ ಮಾಡಿದ್ದಾರೆ.
ಹೌದು ತಾಯಿ ಮಗಳು ಸ್ನಾನ ಮಾಡುವಾಗ ಕದ್ದು ಮುಚ್ಚಿ ಕಾಮುಕನೊಬ್ಬ ವಿಡಿಯೋ ಮಾಡುತ್ತಿದ್ದ. ಕಾಡುಗೊಡಿಯ ಚನ್ನಸಂದ್ರ ದಲ್ಲಿ ಒಂದು ಘಟನೆ ನಡೆದಿದ್ದು, ಕಾಡುಗೋಡಿ ಪೊಲೀಸರು ಇದೀಗ ಮೊಯೀನುದ್ದಿನ್ ನನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಮಂಗಳವಾರ ಇಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಮೊಬೈಲ್ ನಲ್ಲಿರುವ ವಿಡಿಯೋ ಡಿಲೀಟ್ ಮಾಡಿ ಕಾಮುಕನನ್ನು ಜೈಲಿಗೆ ಅಟ್ಟಿದ್ದಾರೆ.