ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪ್ರೀತಿ, ಮದುವೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಒಂದು ಹೆಸರಿನಲ್ಲಿ ಯುವಕ ಮತ್ತು ಯುವತಿರು ಇಬ್ಬರು ಕೂಡ ಮೋಸ ಹೋಗುತ್ತಿದ್ದಾರೆ ಇದೀಗ ಬೆಂಗಳೂರಿನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವತಿಯ ಜೊತೆಗೆ ಪ್ರೀತಿಸುವ ನಾಟಕವಾಡಿದ್ದು, ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದುಕೊಂಡು ಹೋಗಿ ನಿರಂತರವಾಗಿ ಒಂದುವರೆ ವರ್ಷ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಇದೀಗ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಅತ್ಯಾಚಾರ ಎಸಗಿರುವ ಆರೋಪಿಯನ್ನು ಬೆಂಗಳೂರಿನ ತಾವರೆಕೆರೆ ಬಳಿಯ ಹೊಸಪಾಳ್ಯದ ಯುವಕ ಶ್ರೀಕಾಂತ ಎಂದು ಗುರುತಿಸಲಾಗಿದ್ದು, ಆಕೆ, ನೆಲಮಂಗಲದ ಬಳಿಯ ಮಧ್ಯಮ ಕುಟುಂಬದ ಯುವತಿ. ಇನ್‌ಸ್ಟಾಗ್ರಾಮ್ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸಿದ್ದಾನೆ. ಚಾಟಿಂಗ್ ಮಾಡುತ್ತಾ ಬಣ್ಣದ ಮಾತನಾಡಿ ಪ್ರೀತಿಯ ಬುಟ್ಟಿಗೆ ಬೀಳಿಸಿಕೊಂಡಿದ್ದಾನೆ. ನಂತರ ಬೆಂಗಳೂರಿನಲ್ಲಿ ಪಾರ್ಕ್, ಸಿನಿಮಾ ಎಂದೆಲ್ಲಾ ಸುತ್ತಾಡಿದ ನಂತರ ಯುವತಿಗೆ ಮದುವೆ ಮಾಡಿಕೊಳ್ಳುವ ಭರವಸೆ ನೀಡಿದ್ದಾನೆ.
ಬಳಿಕ ಯುವತಿಗೆ ಅದು ಇದು ಹೇಳಿ ನೆಲಮಂಗಲದ ಜಯಸೂರ್ಯ ಹಾಗೂ ಬೈರವ ಲಾಡ್ಜ್‌ಗಳಿಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ. ಈ ಮಧ್ಯೆ ಯುವತಿ ಗರ್ಭಿಣಿ ಆಗುತ್ತಾಳೆ. ಆಗ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಾಗ, ಲೈಫ್ ನಲ್ಲಿ ಸೆಟಲ್ ಆಗಿಲ್ಲವೆಂದು ಮಗುವನ್ನು ಮಾತ್ರೆ ಕೊಟ್ಟು ಅಬಾರ್ಷನ್ ಮಾಡಿಸುತ್ತಾನೆ. ಪುನಃ ಯುವತಿ ಪುಸಲಾಯಿಸಿ ಮತ್ತೆ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬೆಂಗಳೂರು, ನೆಲಮಂಗಲ ಸೇರಿದಂತೆ ವಿವಿಧ ಲಾಡ್ಜ್‌ಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಆದಾಗಲೆಲ್ಲಾ ಅಬಾರ್ಷನ್ ಮಾಡಿಸುತ್ತಾ ಬಂದಿದ್ದಾನೆ.
ಯಾವಾಗ ಯುವತಿಗೆ ಮನೆಯಲ್ಲಿ ಮದುವೆಗೆ ಸಿದ್ದತೆ ಮಾಡಿ ಕೊಳ್ಳುತ್ತಿದ್ದರುರೋ, ಆಗ ಯುವತಿ ನನ್ನನ್ನು ಮದುವೆಯಾಗುವಂತೆ ಯುವಕನ ಮೇಲೆ ಒತ್ತಡ ಹೇರಿದ್ದಾಳೆ.ನೀನೇ ನನ್ನನ್ನು ಮದುವೆ ಮಾಡಿಕೊಳ್ಳಬೇಕು ಎಂದಿದ್ದಕ್ಕೆ ಆಕೆಗೆ ಜಾತಿನಿಂದನೆ ಮಾಡುತ್ತಾ ಹಲ್ಲೆಯನ್ನೂ ಮಾಡಿದ್ದಾನೆ. ನಂತರ, ಯುವತಿ ತಾನು ಮೋಸ ಹೋಗಿದ್ದಾಗಿ ತಿಳಿದು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಶ್ರೀಕಾಂತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.