ಬೆಂಗಳೂರು : ವಾಟರ್ ಫಿಲ್ಟರ್ ರಿಪೇರಿಗೆ ಎಂದು ಬಂದ ವ್ಯಕ್ತಿ ಒಬ್ಬ ಮಹಿಳಾ ಟೆಕ್ಕಿ ಅಡುಗೆ ಮನೆಯಲ್ಲಿದ್ದಾಗ ಹಿಂದಿನಿಂದ ಹೋಗಿ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಿಂದ ಆಘಾತಕ್ಕೊಳಗಾದ ಟೆಕ್ಕಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಮಹೇಂದ್ರನ್ (25) ಎಂಬುವನನ್ನು ಬಂಧಿಸಿದ್ದಾರೆ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ 30 ವರ್ಷದ ಮಹಿಳೆ ಬೆಂಗಳೂರಿನ ಸಿಂಗಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಕಳೆದ ಮೇ 4ರಂದು ಮನೆಗೆ ವಾಟರ್ ಪ್ಯೂರಿಫೈಯರ್ ಅಳವಡಿಸಿಕೊಂಡಿದ್ದರು.
ಮಾರನೇ ದಿನ ಅದರಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಮೊದಲ ದಿನ ಆಗಮಿಸಿದ್ದ ಸರ್ವೀಸ್ ಮಾಡಿಕೊಟ್ಟಿದ್ದ ಯುವಕನಿಗೆ ಕರೆ ಮಾಡಿ ರಿಪೇರಿ ಮಾಡಿಕೊಡುವಂತೆ ಕೋರಿದ್ದರು.ಅದರಂತೆ ಮೇ 5ರಂದು ಸಾಯಂಕಾಲ ಬಂದ ಸುರೇಂದ್ರ ತನ್ನ ಕೆಲಸ ಮುಗಿಸಿ ಅಡಿಗೆ ಮನೆಯಲ್ಲಿದ್ದ ಮಹಿಳಾ ಟೆಕ್ಕಿಯನ್ನು ತಬ್ಬಿ ಕೊಂಡಿದ್ದಾನೆ ಇದರಿಂದ ಕಂಗಾಲದ ಮೇಲೆ ಆತನನ್ನು ಅಡುಗೆ ಮನೆಯಿಂದ ಹೊರಗೆ ತಳ್ಳಿ ಮಾಡಿ ತನ್ನ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದರು.
ತಕ್ಷಣ ಮನೆಗೆ ಬಂದ ಮಹಿಳೆಯ ಸ್ನೇಹಿತ ಕೀ ಬಳಸಿ ಮನೆಯ ಹೊರಗಡೆಯಿಂದ ಬಾಗಿಲು ತೆರೆದಿದ್ದರು ಈ ವೇಳೆ ತಕ್ಷಣ ಆರೋಪಿಯೊ ಆತನ ಜೊತೆಗೂ ಜಳವಾಡಿ ಯಲ್ಲಿದ್ದ ಪರಾರಿಯಾಗಿದ್ದಾನೆ.ಸಂತ್ರಸ್ತೆ ದೂರು ನೀಡಿದ ದಿನವೇ ಕ್ಷಿಪ್ರ ತನಿಖೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ, ತಮಿಳುನಾಡು ಮೂಲದ ಮಹೇಂದ್ರನ್‌ನನ್ನು ಬಂಧಿಸಲಾಯಿತು.