ಬೆಂಗಳೂರು : ಬೆಂಗಳೂರಿನ ಜೆಪಿ ನಗರದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರಿಂದ ಬ್ಯಾಂಕ್ ಸಿಬ್ಬಂದಿಯ ಬೆದರಿಕೆಗೆ ಹೆದರಿ ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೀಗ ವಿದ್ಯುತ್ ಶಾಕ್ ನಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ಬಹಿರಂಗವಾಗಿದೆ.
ಬೆಂಗಳೂರಲ್ಲಿ ನಾಯಿ ಬೊಗಳಿದೆ ಅಂತ ‘ನಟಿ ಅನಿತಾ ಭಟ್’ ಜೊತೆ ಕಿಡಿಗೇಡಿಗಳ ಕಿರಿಕ್: ಕೇಸ್ ದಾಖಲು
ಹೌದು, ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಘಟನೆ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೆ, ಇವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ಮಾಡಿದಾಗ ವಿದ್ಯುತ್ ವೈರ್ ಕಿತ್ತುಕೊಂಡು ಬಂದಿದ್ದು, ಎಲ್ಲರೂ ವಿದ್ಯುತ್ ವೈರ್ ಅನ್ನು ಹಿಡಿದುಕೊಂಡು ವಿದ್ಯುತ್ ಶಾಕ್‌ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಪುನಃ ಪರಿಶೀಲನೆ ಮಾಡಿದಾಗ ಆತ್ಮಹತ್ಯೆಗೆ ಮತ್ತೊಂದು ಕಾರಣ ಕಂಡುಬಂದಿದೆ.
ಮೊದಲು ಕುಟುಂಬದ ಫ್ಯಾಕ್ಟರಿ ನಷ್ಟವಾಗಿದ್ದರಿಂದ, ಬ್ಯಾಂಕ್‌ನವರು ಸಾಲ ವಸೂಲಿಗೆ ಬಂದು ಕಿರಿಕುಳ ನಿಡಿದ್ದರು. ಆದ್ದರಿಂದ ಮನೆಯವರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.ಆದರೆ, ಅಲ್ಲಿ ಬೆಂಕಿ ಹಚ್ಚಿಕೊಂಡಿದ್ದಕ್ಕೆ ಪೆಟ್ರೋಲ್ ಆಗಲೀ, ಗ್ಯಾಸ್ ಆಗಲೀ ಇರಲಿಲ್ಲ. ಆದರೆ, ಬೆಡ್ ರೂಮ್‌ನಲ್ಲಿ ಸುಟ್ಟುಕೊಂಡು ಸಾವನ್ನಪ್ಪಿದ್ದರು. ಇನ್ನು ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ವಿದ್ಯುತ್ ವೈರ್ ಕಿತ್ತುಕೊಂಡು ಬಂದಿದ್ದು, ಎಲ್ಲರೂ ವಿದ್ಯುತ್ ವೈರ್ ಅನ್ನು ಹಿಡಿದುಕೊಂಡು ವಿದ್ಯುತ್ ಶಾಕ್‌ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ : ರಮೇಶ್ ಕತ್ತಿ ಸ್ಪಷ್ಟನೆ
ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಂಡದ ಸಿಬ್ಬಂದಿ ಬಂದು ಸ್ಥಳದಲ್ಲಿ ಸಿಕ್ಕ ಕೆಲವು ವಸ್ತುಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಇನ್ನು ಸಾವಿಗೆ ಕಾರಣವಾದ ವಸ್ತುವಿನ ಬಗ್ಗೆ ಪತ್ತೆ ಮಾಡುತ್ತಿದ್ದಾರೆ. ಈವರೆಗೆ ಸಾವಿನ ಬಗ್ಗೆ ಮೂರ್ನಾಲ್ಕು ಆಯಾಮಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದ್ದು, ಎಫ್‌ಎಸ್‌ಎಲ್ ತಂಡದ ವರದಿಯ ನಂತರ ನಿಜಾಂಶ ಗೊತ್ತಾಗಲಿದೆ. ಮೂವರ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇನ್ನು ಪೊಲೀಸರು ಕೂಡ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.