ಬೆಂಗಳೂರು : ಬೆಂಗಳೂರಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ತನ್ನ ಹುಟ್ಟು ಹಬ್ಬದ ದಿನದಂದೇ ಐಐಎಂ ವಿದ್ಯಾರ್ಥಿ ಒಬ್ಬ ಹಾಸ್ಟೆಲ್ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ಕೈಲಾಶ್‌ಭಾಯ್ ಪಟೇಲ್ (28) ಎಂದು ಗುರುತಿಸಲಾಗಿದೆ. ಈತ ಗುಜರಾತ್ ಮೂಲದವನು ಎಂದು ತಿಳಿದುಬಂದಿದ್ದು, ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು, ಕೈಲಾಶ್ ಮೃತಪಟ್ಟಿದ್ದಾನೆ.
ಶನಿವಾರ ನಿಲಯ್ ತನ್ನ ಹುಟ್ಟುಹಬ್ಬವಿದ್ದ ಕಾರಣ ಸ್ನೇಹಿತರೊಂದಿಗೆ ಹೊರಗಡೆ ತೆರಳಿದ್ದ. ನಂತರ ಹಾಸ್ಟೆಲ್ನಲ್ಲಿರುವ ಸ್ನೇಹಿತನ ಕೊಠಡಿಯಲ್ಲಿ ನಿಲಯ್ ಹುಟ್ಟುಹಬ್ಬ ಆಚರಿಸಲಾಗಿತ್ತು. ಬಳಿಕ ತನ್ನ ಕೋಣೆಗೆ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
It is with profound sadness that IIM Bangalore shares the news of the untimely passing of our PGP 2023-25 student, Nilay Kailashbhai Patel.
A bright student, and a much loved friend to many, Nilay will be sorely missed by the entire IIMB family. pic.twitter.com/aSVp6y7Pcr
— IIM Bangalore (@iimb_official) January 5, 2025