ಬೆಂಗಳೂರು: ನಗರದಲ್ಲಿ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಚುನಾವಣಾಧಿಕಾರಿಗಳು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಒಂದೇ ದಿನ ಬರೋಬ್ಬರಿ 79.54 ಲಕ್ಷ ಹಣ, ವಸ್ತು, ಮದ್ಯ ಸೇರಿದಂತೆ ವಿವಿಧ ಉಡುಗೋರೆಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಬಿಬಿಎಂಪಿಯ ಚುನಾವಣಾ ವಿಭಾಗ ವಿಶೇಷ ಕಮೀಷನ್ ಮಾಹಿತಿ ನೀಡಿದ್ದು, ಇಂದು ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 19,00,000 ಹಣವನ್ನು ಸೀಜ್ ಮಾಡಲಾಗಿದೆ. 120.877 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದಿದೆ.
ಜಪ್ತಿಯಾದಂತ 120.877 ಲೀಟರ್ ಮದ್ಯದ ಬೆಲೆ 1,13,772 ಆಗಿದೆ. ಇದಲ್ಲದೇ 13.79 ಕೆಡಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ.18,42,800 ಆಗಿರುತ್ತದೆ ಎಂದು ತಿಳಿಸಿದೆ.
ಇನ್ನೂ ಗಿಫ್ಟ್, ಉಡುಗೋರೆ ರೂಪದಲ್ಲಿ ಸಂಗ್ರಹಿಸಿದ್ದಂತ 7,90,000 ವಸ್ತುಗಳನ್ನು ಸೀಜ್ ಮಾಡಲಾಗಿದೆ. ಇಂದು ಒಟ್ಟಾರೆ ರೂ.79,54,572 ಮೌಲ್ಯದ ಹಣ, ಮದ್ಯ, ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ ಈ ಸಂಬಂಧ 51 ಎಫ್ಐಆರ್ ದಾಖಲಿಸಿರೋದಾಗಿ ಹೇಳಿದೆ.
JEE Main 2024 : ‘ಜೆಇಇ ಮೇನ್ ಏಪ್ರಿಲ್ ಸೆಷನ್ ಪರೀಕ್ಷೆ’ ದಿನಾಂಕ ಪರಿಷ್ಕರಣೆ ; ವಿವರ ಇಲ್ಲಿದೆ
ಕರ್ನಾಟಕವು ಅತ್ಯಂತ ದುರ್ದೈವದ ಪರಿಸ್ಥಿತಿಯಲ್ಲಿದೆ- ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್