ಬೆಂಗಳೂರು : ಬೆಂಗಳೂರಲ್ಲಿ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಉತ್ತರ ಪ್ರದೇಶ ಮೂಲದ ಸುಮನ್ (22) ಮೃತ ಮಹಿಳೆ ಎಂದು ತಿಳಿದುಬಂದಿದೆ. ಸುಮನ್ ಪತಿ ಶಿವಂ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆಯೇ ಮಹಿಳೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮನೆಯ ಮಾಲೀಕ ಬಾಡಿಗೆ ಕೇಳಲು ಬಂದಾಗ ಈ ಒಂದು ಪ್ರಕರಣ ಬಯಲಿಗೆ ಬಂದಿದೆ. ಗಂಡ ಶಿವಂ ಇಂದು ಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ. ಪತ್ನಿ ಮೃತಪಟ್ಟರು ಪತಿ ಶಿವಂ ಮೃತದೇಹದ ಜೊತೆಯಲ್ಲಿಯೇ ಇದ್ದ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಬೇಡ್ಕರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪತಿ ಶಿವಂನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.