ಬೆಂಗಳೂರು: ಮಂಡ್ಯದ ಕೆರಗೋಡುವಿನಲ್ಲಿ ಹನುಮಧ್ವಜ ವಿವಾದದ ಬೆನ್ನಲ್ಲೆ ಶಿವಾಜಿನಗರದಲ್ಲಿ ಹಸಿರು ಭಾವುಟ ಹಾರಾಡಿ ಮತ್ತೊಂದು ವಿವಾದ ಸೃಷ್ಟಿಯಾಗಿತ್ತು. ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿರುವ ಬಿಬಿಎಂಪಿಗೆ ಸೇರಿದ್ದ ಕಂಬದಲ್ಲಿ ಹಸಿರು ಭಾವುಟ ಹಾರಾಡುತ್ತಿತ್ತು. ಇದಕ್ಕೆ ಎಕ್ಸ್‌ನಲ್ಲಿ ಹಿಂದೂ ಸಂಘಟನೆಯಿಂದ ವಿರೋಧ ವ್ಯಕ್ತವಾಗಿತ್ತು.
ಕೂಡಲೇ ಎಚ್ಚೆತ್ತ ಶಿವಾಜಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಸಿರು ಭಾವುಟ ತೆಗಿಸಿ ರಾಷ್ಟ್ರ ಧ್ವಜ ಭಾವುಟ ಹಾರಿಸಿದ್ದಾರೆ.ವಿಕಾಸ್ ವಿಕ್ಕಿ ಹಿಂದೂ ಎಂಬ ಖಾತೆಯಿಂದ ಟ್ವಿಟ್ ಮಾಡಲಾಗಿತ್ತು. ಅದರಲ್ಲಿ ಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿ ಹಾರುತ್ತಿರುವ ಈ ಧ್ವಜ-ಯಾವ ಧರ್ಮದ್ದು ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು.
ಹಸಿರು ಧ್ವಜ ಸಮೇತ ಟ್ವಿಟ್ ಮಾಡಲಾಗಿತ್ತು. ಮತ್ತೊಬ್ಬ ವ್ಯಕ್ತಿ ಇದನ್ನು ತೆಗೆಸುವ ತಾಕತ್ತು ಇಲ್ವಾ, ಹಿಂದೂಗಳ ಮೇಲೆ ಮಾತ್ರ ನಿಮ್ಮ ಅಟ್ಟಹಾಸವ ಎಂದು ಪ್ರಶ್ನೆ ಮಾಡಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಪೊಲೀಸುರು ಎಚ್ಚೆತ್ತುಕೊಂಡು ಸಂಬಂಧಪಟ್ಟವರ ಸಮ್ಮುಖದಲ್ಲಿ ಹಸಿರು ಬಾವುಟ ತೆಗೆಸಿ ರಾಷ್ಟ್ರ ದ್ವಜ ಹಾರಿಸಿದ್ದಾರೆ.