ಬೆಂಗಳೂರು : ಅವರು ಮೂಲತಃ ಆಂಧ್ರಪ್ರದೇಶದ ಗೋಕವರಂ ಗ್ರಾಮದವರು, ಅವರ ವೃತ್ತಿ ಕಳ್ಳತನ ಮಾಡೋದು, ಹೀಗಾಗಿ ಅವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಸಹಪ್ರಾಣಿಕರ ಮೊಬೈಲ್ ಗಳನ್ನು ಯಾಮರಿಸಿ ಗೊತ್ತಿಲ್ಲದೆ ಎಗರಿಸುತ್ತಿದ್ದರು.ಇದೀಗ 6ಜನರನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
BREAKING:ರಾಮೇಶ್ವರಂ ಕೆಫೆ ಸ್ಫೋಟಕ್ಕೆ ವಿದೇಶಿ ಹ್ಯಾಂಡ್ಲರ್, ‘ಅಲ್-ಹಿಂದ್’ ಸಂಪರ್ಕ ಬಹಿರಂಗ
ಬಂಧಿತರನ್ನು ರವಿತೇಜ, ವೆಂಕಟೇಶ್, ಬಾಲರಾಜ್, ಪೆದ್ದರಾಜ್, ರಮೇಶ್ ಹಾಗೂ ಸಾಯಿಕುಮಾರ್ ಎನ್ನಲಾಗಿದ್ದು, ಆರೋಪಿಗಳಿಂದ 30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 107 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿರುವ ಆರು ಮಂದಿ ಆರೋಪಿಗಳ ಪೈಕಿ ರವಿತೇಜ ಮತ್ತು ಪೆದ್ದರಾಜು ಒಡಹುಟ್ಟಿದ ಅಣ್ಣತಂಮ್ಮಂದಿರು. ಮತ್ತೊಬ್ಬ ಆರೋಪಿ ವೆಂಕಟೇಶ್, ರವಿತೇಜನ ಬಾವಮೈದುನ(ಪತ್ನಿಯ ತಮ್ಮ). ಈ ಮೂವರು ಹಾಗೂ ಉಳಿದ ಮೂವರು ಆರೋಪಿಗಳು ಗೋಕವರಂ ಹಳ್ಳಿ ನಿವಾಸಿಗಳೇ ಆಗಿದ್ದಾರೆ.
ಹಾಸನ : ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ : ಮೂವರಿಗೆ ಗಂಭೀರ ಗಾಯ
ಆರೋಪಿಗಳು ಬಿಎಂಟಿಸಿ ಬಸ್‌ಗಳಲ್ಲಿ ಕದ್ದ ಮೊಬೈಲ್ ಫೋನ್‌ಗಳನ್ನು ತಾವು ತಂಗಿದ್ದ ರೂಮ್‌ಗಳಲ್ಲಿ ಸಂಗ್ರಹಿಸುತ್ತಿದ್ದರು. ಒಮ್ಮೆಗೆ ನೂರು-ಇನ್ನೂರು ಮೊಬೈಲ್ ಸಂಗ್ರಹವಾದ ಬಳಿಕ ಆಂಧ್ರಪ್ರದೇಶಕ್ಕೆ ತೆರಳಿ ಪರಿಚಿತರ ಮುಖಾಂತರ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದರು. ಬಳಿಕ ಎಲ್ಲರೂ ಸಮಾನವಾಗಿ ಹಣವನ್ನು ಹಂಚಿಕೊಳ್ಳುತ್ತಿದ್ದರು. ಪೊಲೀಸರು ತನಿಖೆ ವೇಳೆ ಆರೋಪಿಗಳ ಚನ್ನಸಂದ್ರ ಮತ್ತು ಅವಲಹಳ್ಳಿ ರೂಮ್ ಮೇಲೆ ದಾಳಿ ಮಾಡಿದಾಗ ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣವನ್ನು ಭೇದಿಸಿ ಕುಖ್ಯಾತ ಗೋಕವರಂ ಗ್ಯಾಂಗ್‌ನ ಆರು ಮಂದಿ ಸದಸ್ಯರನ್ನು ಬಂಧಿಸಿದ ವೈಟ್‌ಫೀಲ್ಡ್ ಠಾಣೆ ಪೊಲೀಸರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶ್ಲಾಘಿಸಿದರು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡಕ್ಕೆ 25 ಸಾವಿರ ನಗದು ಬಹುಮಾನ ಘೋಷಿಸಿದರು.
BREAKING : ಬೆಂಗಳೂರಿನ ಜಯನಗರದಲ್ಲಿ ಕಾರಿನೊಳಗೆ ಕೋಟಿ ಕೋಟಿ ಹಣ ಪತ್ತೆ : ಐವರು ಸ್ಥಳದಿಂದ ಪರಾರಿ
‘ಗೋಕವರಂ’ ಗ್ಯಾಂಗ್ ಹಿನ್ನೆಲೆ ಏನು?
ಗೋಕವರಂ ಎಂಬುದು ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿ. ಈ ಒಂದು ಹಳ್ಳಿಯಲ್ಲಿ ವಾಸವಾಗಿರುವ ಎಲ್ಲಾ ಗಂಡಸರ ಪ್ರಮುಖ ವೃತ್ತಿ ಕಳ್ಳತನ.ಇವರು ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು, ಮಹಾರಾಷ್ಟ್ರ ಈ ಅಕ್ಕಪಕ್ಕದ ರಾಜ್ಯಗಳಿಗೆ ತೆರಳಿ ಅಲ್ಲಿ ರೂಮ್ ಗಳನ್ನು ಬಾಡಿಗೆಗೆ ಪಡೆದು, ಕಳ್ಳತನಕ್ಕೆ ಎಳೆಯುತ್ತಾರೆ ಆದರೆ ಇವರ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿ ಇರುತ್ತಾರೆ ನಂತರ ಇವರು ಕಳ್ಳತನ ಮಾಡಿ ಊರಿಗೆ ವಾಪಸ್ ಆಗುತ್ತಾರೆ. ಹೀಗಾಗಿ ಗೋಕಾವರಂ ಗ್ಯಾಂಗ್ ಎಂದು ಕುಖ್ಯಾತಿ ಪಡೆದಿದ್ದು ಇದೀಗ ಬೆಂಗಳೂರಿನ ವೈಟ್ಫೀಲ್ಡ್ ಠಾಣೆ ಪೊಲೀಸರು ಈ ಗ್ಯಾಂಗನ್ನು ಬಂಧಿಸಿದೆ.