ಬೆಂಗಳೂರು: ಇನ್ನೇನು ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಹೊಸ ವರ್ಷ ಸ್ವಾಗತಕ್ಕಾಗಿ ಬೆಂಗಳೂರು ಜನತೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಆಚರಣೆಗೆ ಸಕಲ ತಯಾರಿ ಮಾಡಿಕೊಂಡಿದೆ. ಈ ನಡುವೆಯೇ 18 ವರ್ಷ ತುಂಬದ ಅಪ್ರಾಪ್ತರು ಪಾರ್ಟಿ ಎಂಜಾಯ್ ಮಾಡಲು ಕಳ್ಳದಾರಿ ಹಿಡಿದಿದ್ದು, ಕಲರ್ ಝೇರಾಕ್ಸ್ನ ಫೇಕ್ ಆಧಾರ್ ಕಾರ್ಡ್ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೆಶನ್ ಎಂದ್ರೆ ಎಣ್ಣೆ, ಎಣ್ಣೆ ಜೊತೆಗೆ ಡಿಜೆ ಬೇಕೇ ಬೇಕು. ಇದಕ್ಕಂತಲೇ ಸಿಲಿಕಾನ್ ಸಿಟಿಯ ಪಬ್ಗಳು ಈ ವರ್ಷ ಹೊಸ ಹೊಸ ಡಿಜೆ ಪಾರ್ಟಿಗಳನ್ನು ಆಯೋಜನೆ ಮಾಡಿದೆ. ಆದರೆ ಕಳೆದೆರಡು ವರ್ಷದಿಂದ ನ್ಯೂಇಯರ್ ಸೆಲೆಬ್ರೆಶನ್ ಮಾಡದ ಕಾರಣ ಈ ವರ್ಷ ನ್ಯೂಇಯರ್ಗೆ ಯಾವುದೇ ಅಡೆ ತಡೆಗಳು ಇಲ್ಲ. ಹೀಗಾಗಿ ಎಲ್ಲರೂ ಪಾರ್ಟಿ ಮೂಡ್ನಲ್ಲಿದ್ದಾರೆ.