ಬೆಂಗಳೂರು: ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಸುವ, ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಗೇಮಿಂಗ್, ಅನಿಮೇಷನ್, ವಿಷುಯಲ್ಎಫ್ ಎಕ್ಸ್ (ಜಿಎಎಫ್ಎಕ್ಸ್) ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ವಾತಾವರಣ ಸೃಷ್ಟಿಸಲು, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲು ಹಾಗೂ ಈ ಕ್ಷೇತ್ರದಲ್ಲಿರುವವರು ಒಂದೇ ವೇದಿಕೆಯಡಿ ಚರ್ಚಿಸಲು ಜ.29ರಿಂದ 31ರವರೆಗೆ ನಗರದ ‘ದಿ ಹೊಟೇಲ್ ಲಲಿತ್ ಅಶೋಕ್ ‘ನಲ್ಲಿ ‘ಬೆಂಗಳೂರು ಜಿಎಎಫ್ಎಕ್ಸ್-2024″ ಸಮ್ಮೇಳನ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಈ ವಿಷಯ ತಿಳಿಸಿದ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ 2016ರಿಂದ ಈ ಸಮ್ಮೇಳನ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಕರ್ನಾಟಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಶೇ. 2 – 20ರಷ್ಟು ಪಾ ಪಾಲು ಹೊಂದಿದೆ.
ಈ ಸಮ್ಮೇಳನದಲ್ಲಿ ವಿವಿಧ ಈ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು 115 ಗೋಷ್ಠಿ ಏರ್ಪಡಿಸಲಾಗಿದೆ. 130 ಜನರು ವಿಷಯ ಮಂಡನೆ ಮಾಡಲಿದ್ದಾರೆ. 22 ಪ್ರಖ್ಯಾತ ಅಂತರಾಷ್ಟ್ರೀಯ ಭಾಷಣಕಾರರು 100 ವಿವಿಧ ದೇಶಗಳ ಪ್ರತಿನಿಧಿಗಳುಭಾಗಿಯಾಗಲಿದ್ದಾರೆ.
ಜತೆಗೆ ರಾಜ್ಯದಲ್ಲಿ ವ್ಯಾಪಾರದ ಬೆಳವಣಿಗೆಗೆ ಅನುಕೂಲವಾಗುವಂತೆ ಬಿ2ಬಿ ಸಭೆಗಳು ಮತ್ತು ವಿಶೇಷವಾಗಿ ಸ್ಟಾರ್ಟ್ ಆಪ್ಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದು ಸಚಿವ ಖರ್ಗೆ ವಿವರಿಸಿದರು.29ರಂದು ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಉಪಸ್ಥಿತ ಉಪಸ್ಥಿತರಿರುತ್ತಾರೆ. ಐಟಿ, ಬಿಟಿ ಕಾರ್ಯದರ್ಶಿ ಕೌರ, ಸಮ್ಮೇಳನದ ಸಹಭಾಗಿತ್ವ ನೀಡಿರುವ ಅಬೈ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.