ಬೆಂಗಳೂರು : ಸ್ನೇಹಿತರ ಹುಚ್ಚಾಟದಲ್ಲಿ ಒಬ್ಬನ ಪ್ರಾಣವೇ ಹಾರಿಹೋಗಿದೆ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ನೇಹಿತರ ನಡುವೆ ಹುಚ್ಚಾಟ ನಡೆದಿದ್ದು, ಈ ವೇಳೆ ಗುದದ್ವಾರದಲ್ಲಿ ಗಾಳಿ ತುಂಬಿದ ಪರಿಣಾಮ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
BREAKING : ಬೆಂಗಳೂರಿನಲ್ಲಿ ‘ಕೌಟುಂಬಿಕ ಕಲಹದ’ ಹಿನ್ನೆಲೆ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ
ಯೋಗಿಶ್ (28) ಮೃತ ಯುವಕನೆಂದು ಹೇಳಲಾಗುತ್ತಿದ್ದು, ಮಾ25ರಂದು ಬೈಕ್ ಸರ್ವೀಸ್ ಮಾಡಲು ಸಿಎನ್ ಎಸ್ ಬೈಕ್ ಸರ್ವೀಸ್ ಸೆಂಟರ್ ಗೆ ಮುರಳಿ ಎಂಬಾತ ಹೋಗಿದ್ದ ಇದೇ ವೇಳೆ ಅದೇ ಸೆಂಟರ್ ಗೆ ಯೋಗಿಶ್ ಕೂಡ ಬಂದಿದ್ದ. ಇಬ್ಬರೂ ಈ ವೇಳೆ ಏರ್ ಪ್ಲೇಜರ್ ಪೈಪ್ ನಿಂದ ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಯೋಗಿಶ್ ನ ಮುಖ ಹಾಗೂ ಹೊಟ್ಟೆಗೆ ಮುರಳಿ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಮುರಳಿ ಗಾಳಿ ಬಟ್ಟಿದ್ದ. ಇದು ಎಡವಟ್ಟಿಗೆ ಕಾರಣವಾಯ್ತು.
BREAKING : ಚಿತ್ರದುರ್ಗ : ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ದಾಖಲೆ ಇಲ್ಲದ ‘5 ಕೆಜಿ’ ಚಿನ್ನಾಭರಣ ಜಪ್ತಿ
ಯೋಗಿಶ್ ಗುದದ್ವಾರಕ್ಕೆ ಗಾಳಿ ಬಿಟ್ಟ ಕಾರಣ ಹೊಟ್ಟೆ ಉತಾ ಬಂದು ಕರಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗಿಶ್ ನನ್ನ ಸ್ನೇಹಿತ ಮುರಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗಿಶ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡು ಸಂಪಿಗೇಹಳ್ಳಿ ಪೊಲೀಸರು ಸ್ನೇಹಿತ ಮುರಳಿಯನ್ನು ಬಂಧಿಸಿದ್ದಾರೆ.