ಬೆಂಗಳೂರು : ಕಡಿಮೆ ಬೆಲೆಗೆ ವಜ್ರ ಕೊಡುವುದಾಗಿ ಹೇಳಿ ನಕಲಿ ವಜ್ರ ನೀಡಿ ವಂಚಿಸುತ್ತಿದ್ದ ನಾಲ್ವರನ್ನು ಇದೀಗ ಬೆಂಗಳೂರಿನ ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
‘ಪ್ಲಾಸ್ಟಿಕ್ ಮರುಬಳಕೆ’ ಮಾಡಲು ‘ಕರ್ನಾಟಕ ಸರ್ಕಾರ’ದೊಂದಿಗೆ ‘ಬಿಸ್ಲೇರಿ ಇಂಟರ್ನ್ಯಾಷನಲ್’ ಪಾಲುದಾರಿಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಎಲ್ ಬಳಿ ಘಟನೆ ನಡೆದಿದೆ. ರವಿ, ನವೀನ್ ಕುಮಾರ್, ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದ್ದು ಏರ್ಪೋರ್ಟ್ ನ ಖಾಸಗಿ ಹೋಟೆಲ್ ನಲ್ಲಿ ಆರೋಪಿಗಳು ಪರಸ್ಪರ ಭೇಟಿ ಮಾಡಿದ್ದರು ಎನ್ನಲಾಗುತ್ತಿದೆ.
`EEDS’ ತಂತ್ರಾಂಶದಲ್ಲಿ `ಶಿಕ್ಷಕರ ಸೇವಾ ವಿವರ’ ಅಂತಿಮಗೊಳಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆದೇಶ
ಈ ವೇಳೆ ಡೈಮಂಡ್ ವ್ಯವಹಾರ ಮಾಡುವುದಾಗಿ ಆರೋಪಿಗಳು ತಿಳಿಸಿದರು.10 ಕೋಟಿ ರೂಪಾಯಿ ಮೌಲ್ಯದ ವಜ್ರ 3 ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದರು.ಈ ವೇಳೆ ದೂರುದಾರ ಲಕ್ಷ್ಮೀನಾರಾಯಣಗೆ ನಕಲಿ ವಜ್ರ ಅನ್ನುವುದು ಗೊತ್ತಾಗಿತ್ತು. ಕೂಡಲೇ ಕೆ ಐ ಎ ಎಲ್ ಠಾಣೆ ಪೋಲಿಸರಿಗೆ ಲಕ್ಷ್ಮೀನಾರಾಯಣ ಮಾಹಿತಿ ನೀಡಿದ್ದಾನೆ.ಬಳಿಕ ನಾಲ್ವರು ಆರೋಪಿಗಳನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.