ಬೆಂಗಳೂರು : ‘RAW’ (Research and Analysis Wing) ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ MCA ಪದವೀಧರೆಗೆ ಖದೀಮನೊಬ್ಬ ಸುಮಾರು 8 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕದ ಸುಪ್ರೀಂಲೇಔಟ್ ನ ವೇಣುಗೋಪಾಲ್ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ. MCA ಪದವೀಧರೆಯಾದ ಚಿತ್ರಪ್ರಿಯಾ ಬಳಿ 8 ಲಕ್ಷ ಪಡೆದಿದ್ದ ವೇಣುಗೋಪಾಲ್ ಚಿತ್ರಪ್ರಿಯಾ ಪತಿಯ ಸ್ನೇಹಿತನಿಂದ ಆರೋಪಿ ವೇಣುಗೋಪಾಲ್ ಪರಿಚಿತನಾಗಿದ್ದ ಎನ್ನಲಾಗುತ್ತಿದೆ.
RAW ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ವೇಣುಗೋಪಾಲ್ ಇಂಟರ್ವ್ಯೂ ಕೂಡ ಮಾಡಿದ್ದ ಎನ್ನಲಾಗುತ್ತಿದೆ. ಬಳಿಕ ಮಾರ್ಕ್ಸ್ ಕಾರ್ಡ್ ಪಡೆದು ನಕಲಿ ಆಫರ್ ಲೆಟರ್ ನೀಡಿದ್ದ. ಇದೀಗ ಆರೋಪಿ ವೇಣುಗೋಪಾಲ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.