ಬೆಂಗಳೂರು : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಎಲ್ಲೆಡೆ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ದಾಖಲೆ ಇಲ್ಲದ ಸುಮಾರು 7.86 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮಧ್ಯವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರ್ಗಿಯಲ್ಲಿ ಅಮಾನವೀಯ ಘಟನೆ: ಬಡ್ಡಿ ಹಣಕ್ಕಾಗಿ ವ್ಯಕ್ತಿಯ ಮೇಲೆ ಆಸಿಡ್ ಎರಚಿ ಕೀಚಕ ಕೃತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ದಾಖಲೆ ಇಲ್ಲದ ಸಂಗ್ರಹಿಸಿಟ್ಟಿದ್ದ 7.86 ಕೋಟಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿಕೊಳ್ಳಗಿದೆ.ಜಿಲ್ಲಾ ಚುನಾವಣಾ ಅಧಿಕಾರಿಗಳ ಭರ್ಜರಿ ಕಾರ್ಯಚರಣೆ ನಡೆಸಿದ್ದು ಜಿಲ್ಲಾ ಚುನಾವಣಾ ಅಧಿಕಾರಿ ಡಾ. ಶಿವಶಂಕರ್ ನೇತೃತ್ವದಲ್ಲಿ ತಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.
BREAKING : ಇಂಡೋನೇಷ್ಯಾದಲ್ಲಿ 6.4 ತೀವ್ರತೆಯ ಪ್ರಭಲ ಭೂಕಂಪ |Earthquake
ಅಲ್ಲದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಬಕಾರಿ ಪೊಲೀಸರ ತಂಡದಿಂದಲೂ ಕೂಡ ಜಂಟಿ ಕಾರ್ಯಾಚರಣೆ ನಡೆಸಿ ದಾಳಿ ನಡೆಸಲಾಗಿದೆ. ನೆಲಮಂಗಲದ ಡಿಸ್ಟಲರಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಮದ್ಯವನ್ನು ಸಂಗ್ರಹಿಸಡಾಲಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ 45 ಕೇಸುಗಳು ದಾಖಲಾಗಿವೆ.2 ಲಾರಿ, 2 ಕಾರು, ಬೈಕಗಳು ಸೇರಿದಂತೆ ಒಂಬತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೆ ವೇಳೆ ಲಕ್ಷಾಂತರ ಮೌಲ್ಯದ 10 ಕೆಜಿ ಗಾಂಜಾ ವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.