ಬೆಂಗಳೂರು : ವೃದ್ಧೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆ ದಾಟುವಾಗ ವೇಗವಾಗಿ ಬಂದ ಸ್ಕೂಟರ್ ಒಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ನಿಮ್ಮ ನಗರಗಳಲ್ಲಿ ನೀರಿನ ಸಮಸ್ಯೆ ಇದೆಯೇ? : ಈ ಅಧಿಕಾರಿಗಳಿಗೆ ಕರೆ ಮಾಡಿ
ತಿಗಳರಪಾಳ್ಯದ ನಿವಾಸಿ ಶಾಂತಮ್ಮ (65) ಮೃತ ದುರ್ದೈವಿ. ತಮ್ಮ ಮನೆ ಸಮೀಪ ದೇವಾಲಯ ಬಳಿ ಶಾಂತಮ್ಮ ರಸ್ತೆ ದಾಟುವಾಗ ಈ ಘಟನೆ ನಡೆದಿದೆ. ಕೂಡಲೇ ಗಾಯಾಳು ರಕ್ಷಣೆಗೆ ಸ್ಕೂಟರ್ ಸವಾರ ಅರ್ಚಕ ಧಾವಿಸಿದ್ದಾರೆ. ತಾವೇ ಆ್ಯಂಬುಲೆನ್ಸ್ ಮಾಡಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಶಾಂತಮ್ಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು : ಇಂದಿನಿಂದ ‘ರಾಮೇಶ್ವರಂ ಕೆಫೆ’ ಪುನಾರಂಭ : ಬೆಳಿಗ್ಗೆಯಿಂದಲೇ ಗ್ರಾಹಕರಿಗೆ ‘ಮುಕ್ತ ಪ್ರವೇಶ’
ಅಪಘಾತದ ಬಳಿಕ ಸಂಬಂಧಿಕರು ನೂರು ಸಲ್ಲಿಸಲು ನಿರಾಕರಿಸಿದ್ದಾರೆ, ಆದರೆ ಅಪಘಾತಗಳಲ್ಲಿ ಪೊಲೀಸ್ ದೂರು ದಾಖಲಾಗದೆ ಹೋದರೆ ಮೃತ ಸಾಗಿಸಲು ಸಮಸ್ಯೆಯಾಗುತ್ತದೆ ಎಂದು ಹೇಳಿ ಮೃತದೇಹವನ್ನು ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್ ಚಾಲಕ ಪಟ್ಟು ಹಿಡಿದಿದ್ದಾನೆ.ಅಂತಿಮವಾಗಿ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಹೊತ್ತಿಗೆ ಸೂರ್ಯೋದಯವಾಗಿದೆ. ಅಲ್ಲಿವರೆಗೆ ಆ್ಯಂಬುಲೆನ್ಸ್‌ನಲ್ಲೇ ಮೃತದೇಹ ಇತ್ತು.
ರಂಜಾನ್ : ‘ಉರ್ದು ಶಾಲೆಗಳಲ್ಲಿ’ ಅರ್ಧ ದಿನ ಪಾಠ ಮಾಡಿ ಸಮಯ ಬದಲಾಯಿಸಿ : ಶಾಲಾ ಶಿಕ್ಷಣ ಇಲಾಖೆ ಆದೇಶ