ಬೆಂಗಳೂರು : ಮಾಲೀಕನ ಚೆಕ್‌ಗಳನ್ನು ಕದ್ದಿರುವ ಕಾರು ಚಾಲಕ, ನಕಲಿ ಸಹಿ ಮಾಡಿ ಸುಮಾರು 45 ಲಕ್ಷ ರೂ. ಲಪಟಾಯಿಸಿದ್ದಾನೆ. FIR ದಾಖಲಾಗಿ 5 ತಿಂಗಳು ಕಳೆದರೂ ಗೋವಿಂದರಾಜನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.
ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಇಂಜಿನಿಯರ್ ಕೆ. ಪುಟ್ಟಿನರಸಪ್ಪ ಕಳೆದುಕೊಂಡವರು ಎಂದು ಹೇಳಲಾಗುತ್ತಿದೆ.ಪುಟ್ಟನರಸಪ್ಪ ಬಳಿ ನಿತಿನ್‌ಕುಮಾರ್ ಎಂಬಾತ ಕಾರು ಚಾಲಕನಾಗಿ 8 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ. ಆತನಿಗೆ 15 ಸಾವಿರ ರೂ. ಸಂಬಳ ನೀಡುತ್ತಿದ್ದರು. ಆರಂಭದಲ್ಲಿ ಒಳ್ಳೆಯವನಂತೆ ನಟಿಸಿ ಮಾಲೀಕರ ವಿಶ್ವಾಸ ಗಳಿಸಿಕೊಂಡಿದ್ದ.ಹೀಗಾಗಿ ಮಾಲೀಕರು ಆತನಿಗೆ ತಮ್ಮ ಬ್ಯಾಂಕಿನ ಚೆಕ್‌ಗಳನ್ನು ಹಾಕುವುದು ಮತ್ತು ಹಣ ಡ್ರಾ ಮಾಡಲು ಹೇಳುತ್ತಿದ್ದರು.
2023ರ ಫೆಬ್ರವರಿಯಲ್ಲಿ ನಿತಿನ್‌ಕುಮಾರ್, ಮಾಲೀಕರಿಗೆ ಗೊತ್ತಿಲ್ಲದಂತೆ 15 ಚೆಕ್ ಗಳನ್ನು ಕಳವು ಮಾಡಿದ್ದ. ಮಾಲೀಕರ ಸಹಿಯನ್ನು ಫೋರ್ಜರಿ ಮಾಡಿ, ಅವರ ಮೊಬೈಲ್ ತೆಗೆದುಕೊಂಡು ಬ್ಯಾಂಕಿನ ಯಾವುದೇ ಮೆಸೇಜ್ ಬಾರದ ರೀತಿಯಲ್ಲಿ ಬ್ಲಾಕ್ ಮಾಡಿದ್ದ. ನಂತರ ಆತನ ಸ್ನೇಹಿತರಾದ ವಿಜೇತ್, ರಘು ಹಾಗೂ ಇತರರ ಅಕೌಂಟ್‌ಗಳಿಗೆ 45 ಲಕ್ಷ ರೂ ಗಳ ಚೆಕ್‌ಗಳನ್ನು ಹಾಕಿ ಅವರ ಮೂಲಕ ಹಣ ವಿತ್ ಡ್ರಾ ಮಾಡಿಸಿಕೊಂಡಿದ್ದಾನೆ.
ಪುಟ್ಟನರಸಪ್ಪ ಬ್ಯಾಂಕ್‌ಗೆ ತೆರಳಿ ಹಣ ವಿತ್ ಡ್ರಾ ಮಾಡಲು ಮುಂದಾದಾಗ, ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇದೆ ಎಂದು ಹೇಳಿದ್ದಾರೆ. ಗಾಬರಿಗೊಂಡು ಮ್ಯಾನೇಜರ್ ಬಳಿ ಹೋಗಿ ವಿಚಾರಿಸಿದಾಗ, ಇವತ್ತು ಕೂಡ ನಿಮ್ಮ ಅಕೌಂಟ್‌ನಿಂದ 3 ಲಕ್ಷ ರೂ. ಡ್ರಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ವಿಚಾರಣೆ ಮಾಡಿದ್ದು, ಈ ಸಮಯದಲ್ಲಿ ಚಾಲಕ ಮನೆಯಿಂದ ತಪ್ಪಿಸಿಕೊಂಡು ಹೋಗಿರುವುದು ಗೊತ್ತಾಗಿದೆ. ಆತನ ಮೊಬೈಲ್‌ಗೆ ಕರೆ ಮಾಡಿದಾಗ, ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಗೋವಿಂದ ರಾಜನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ಎಲೆಕ್ಟೋರಲ್ ಬಾಂಡ್’ ದಾನಿಗಳ ಹೆಸರು ಬಹಿರಂಗಕ್ಕೆ ಸುಪ್ರೀಂ ಆದೇಶ: ಎಸ್‌ಬಿಐ ಮತ್ತು ಇಸಿ ಮೇಲೆ ಎಲ್ಲರ ಕಣ್ಣು
BREAKING : ವಿವಾಹದ ಆನ್ಲೈನ್ ನೋಂದಣಿ ಪ್ರಕ್ರಿಯೆಗೆ ಪ್ರಾಯೋಗಿಕ ಚಾಲನೆ : ಶೀಘ್ರ ರಾಜ್ಯಾದ್ಯಂತ ವಿಸ್ತರಣೆ