ಬೆಂಗಳೂರು : ಕಳೆದ ವರ್ಷ ಇಡೀ ದೇಶಾದ್ಯಂತ ಹಿಜಾಬ್ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಶಾಲಾ ಕಾಲೇಜುಗಳಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಆಗಮಿಸಬಾರದು ಎಂದು ಅನೇಕ ಹೋರಾಟ ಪ್ರತಿಭಟನೆಗಳು ನಡೆದಿದ್ದವು.
ಅದೇ ರೀತಿಯಾಗಿ ಈಗ ಈ ವಸ್ತ್ರ ಸಂಹಿತೆ ದೇವಸ್ಥಾನಕ್ಕೂ ಕಾಲಿಟ್ಟಿದ್ದು,ಬೆಂಗಳೂರಲ್ಲಿ ಅರೆಬರೆ ಬಟ್ಟೆ ಹಾಕಿಕೊಂಡು ಅವರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ ಎಂದು ನಿರ್ಬಂಧ ಹೇರಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಬೆಂಗಳೂರಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಆರಂಭಿಸಿದ್ದು ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಅಭಿಯಾನ ಆರಂಭಿಸಿದೆ.ಮಧ್ಯಾಹ್ನ 12ಕ್ಕೆ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು ವಸಂತನಗರದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಇಂದು ಚಾಲನೆ ನೀಡಲಾಗುತ್ತದೆ.
ದೇವಾಲಯಗಳಿಗೆ ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ಪ್ರವೇಶ ನಿರ್ಬಂಧಿಸಬೇಕು.ಸ್ಕರ್ಟ್, ಮಿಡ್ಡಿ, ಹರಿದ ಜೀನ್ಸ್, ಶಾರ್ಟ್ಸ್ ಧರಿಸಿ ಬರುವವರಿಗೆ ನಿರ್ಬಂಧ ಹೇರಬೇಕು. ದರ್ಶನಕ್ಕೆ ಅವಕಾಶ ನೀಡದಂತೆ ಸಂಘವು ಆಗ್ರಹಿಸಿದೆ ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಈ ಕುರಿತಂತೆ ಅಭಿಯಾನ ಆರಂಭಿಸಿದೆ.ಈ ಕುರಿತಂತೆ ದೇಗುಲಗಳ ಮುಂದೆ ಹಿಂದೂ ಕಾರ್ಯಕರ್ತರು ಬೋರ್ಡ್ ಹಾಕಲಿದ್ದಾರೆ.