ಬೆಂಗಳೂರು : ಕಳೆದ ಎರಡು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನರು ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾರೆ. ಬೆಂಗಳೂರು ನಗರದ ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಗಡೆ ಕಾಲಿಡಲು ಸಹ ಆಗುತ್ತಿಲ್ಲ.
ಇದರ ಮಧ್ಯ ಬೀದಿ ನಾಯಿಗಳು ಒಂದು ಹೊತ್ತಿನ ಊಟಕ್ಕೆ ಪರದಾಡಿರುವ ಘಟನೆ ಬೆಂಗಳೂರಿನ ಕೆ ಆರ್ ಪುರಂ ನ ಸಾಯಿ ಲೇಔಟ್ ನಲ್ಲಿ ಈ ಒಂದು ಮನಕಲಕುವ ದೃಶ್ಯ ಕಂಡು ಬಂದಿದೆ. ರಸ್ತೆ ಬದಿಯಲ್ಲಿ ಅಲ್ಲೋ ಇಲ್ಲೋ ಆಶ್ರಯ ಪಡೆದುಕೊಂಡು ಮಳೆ ನೀರಿನಲ್ಲಿ ವಾಸಿಸುತ್ತವೆ.ಆದರೆ ಭೀಕರ ಮಳೆಗೆ ತತ್ತರಿಸಿದ ನಾಯಿಗಳು ಊಟ ಸಿಗದೇ ಮಣ್ಣು ತಿನ್ನುತ್ತಿರುವ ದೃಶ್ಯ ಮನ ಕಲಕುವಂತಿದೆ.ಸಾಕು ನಾಯಿಯಾಗಿದ್ದರೆ ಮನೆ ಮಾಲೀಕರು ಹೇಗೋ ಮಾಡಿ ಅದನ್ನು ಕಾಪಾಡಿ ಊಟ ನೀಡುತ್ತಿದ್ದರು.
ಆದರೆ ಬೀದಿ ನಾಯಿಗಳು ಹಾಗಲ್ಲ ಇದನ್ನ ತಿನ್ನುತ್ತಾ ಕಾಲ ಕಳೆಯುತ್ತವೆ ಆದರೆ ಇದೀಗ ಬೆಂಗಳೂರು ನಗರ ಸಂಪೂರ್ಣ ಜಲಾವೃತ ಆಗಿರುವುದರಿಂದ ಬೀದಿ ನಾಯಿಗಳು ಊಟಕ್ಕೂ ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಕೆಆರ್ ಪುರಂನ ಸಾಯಿ ಲೇಔಟ್ ನಲ್ಲಿರುವ ನಿವಾಸಿಗಳು ತಮಗೆ ಕೈಲಾದಷ್ಟು ಆಹಾರವನ್ನು ಅಥವಾ ಹಾಲು ಬಿಸ್ಕೆಟ್ ಇನ್ನೂ ಯಾವುದೋ ಒಂದು ಪದಾರ್ಥವನ್ನು ಆ ನಾಯಿಗಳಿಗೆ ಹಾಕಿದರೆ ಮೂಕ ಪ್ರಾಣಿಗಳು ಎಲ್ಲೋ ಒಂದು ಕಡೆ ಬದುಕೊಳ್ಳುತ್ತವೆ.