ಬೆಂಗಳೂರು : ಬೆಂಗಳೂರಲ್ಲಿ ವೈದ್ಯ ಪತಿಯಿಂದಲೇ ಡಾಕ್ಟರ್ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರತಿದೆ. ಸಿನಿಮಾ ಸ್ಟೈಲ್ ನಲ್ಲಿ ಕೃತಿಕಾ ರೆಡ್ಡಿ ಕೊಲೆಗೆ ಪತಿ ಮಹೇಂದ್ರ ಪ್ಲಾನ್ ಮಾಡಿದ್ದ. ಆದರೆ ಸಿಕ್ಕಿಬೀಳದಿರಲು ಖತರ್ನಾಕ್ ಸಂಚು ರೂಪಿಸಿದ್ದಾನೆ ಇದೀಗ ವಿಚಾರಣೆ ವೇಳೆ ಸ್ಪೋಟಕ ಅಂಶ ಬಯಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಡಾ. ಮಹೇಂದ್ರ ಅನೆಸ್ಥೆಶಿಯಾ ಕುರಿತಂತೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಇದರಿಂದಲೇ ಕೃತಿಕಾಳನ್ನು ಕೊಲೆ ಮಾಡಿದ್ದಾನೆ. ದೇಹದಲ್ಲಿ ಅನೆಸ್ಥೆಶಿಯ ಹೆಚ್ಚು ಸಮಯ ಇರುವುದಿಲ್ಲ. ಅನಸ್ತೇಶಿಯ ನಾಲ್ಕು ಗಂಟೆಯಲ್ಲಿ 50% ಕಡಿಮೆ ಆಗುತ್ತದೆ 24 ಗಂಟೆ ಕಳೆದರೆ ಅನಸ್ತೇಶಿಯ ಸಂಪೂರ್ಣ ಅಂಶ ನಾಶವಾಗುತ್ತದೆ. ಪೋಸ್ಟ್ಮಾರ್ಟಂಮಾಡಿದರೂ ಕೂಡ ಅನಸ್ತೇಶಿಯಾ ಪತ್ತೆ ಕಂಡುಹಿಡಿಯುವುದು ಕಷ್ಟ. ಹಾಗಾಗಿ ಆತ ಪ್ಲಾನ್ ಮಾಡಿ ಕೃತಿಕಾ ರೆಡ್ಡಿಗೆ ಅನಸ್ತೇಶಿಯ ನೀಡುತ್ತಿದ್ದ ಪ್ರೋಪೋಪೋಲ್ ಅನೆಸ್ಥೆಶಿಯಾ ಕೊಟ್ಟಿದ್ದ ಎಂದು ತಿಳಿದುಬಂದಿದೆ.
ಇದೀಗ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಂದ್ರ ರೆಡ್ಡಿಯ ಮೊಬೈಲ್ ಮತ್ತು ಲ್ಯಾಪ್ಟಾಪ್ ಸೀಜ್ ಮಾಡಿದ್ದಾರೆ. ಪತ್ನಿ ಮೆಡಿಕಲ್ ಸರ್ಟಿಫಿಕೇಟ್ಸ್, ಮೊಬೈಲ್ ಐ ಪ್ಯಾಡ್ ಸೀಜ್ ಮಾಡಿದ್ದಾರೆ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಪೊಲೀಸರು ಮಹೇಂದ್ರ ರೆಡ್ಡಿ ನಿವಾಸದಲ್ಲಿ ಸತತ ಮೂರು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದಾರೆ. ಗುಂಜೂರಿನ ಮಹೇಂದ್ರ ರೆಡ್ಡಿ ನಿವಾಸದಲ್ಲಿ ಮಹಜರು ನಡೆಸಿದ್ದಾರೆ.