ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ಗೇನು ಕಮ್ಮಿ ಇಲ್ಲ. 1 ಕಿಮೀ ಮುಂದೆ ಸಾಗ್ಬೇಕು ಅಂದ್ರೆ, ಬಹಳ ಸಮಯ ತೆಗೆದುಕೊಳ್ಳುತ್ತದೆ. ಹೀಗೆ ಟ್ರಾಫಿಕ್ನಲ್ಲಿ ಸಿಲುಕಿದ ವೈದ್ಯರೊಬ್ಬರು ರೋಗಿ ಜೀವ ಉಳಿಸಿಲು ತನ್ನ ಕಾರನ್ನು ಅಲ್ಲೇ ನಿಲ್ಲಿಸಿ 3 ಕಿಮೀ ಓಡಿದ್ದಾರೆ. ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ವೈದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರು ಆಗಸ್ಟ್ 30 ರಂದು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದಾಗ ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡರು. ವಿಳಂಬವಾದರೆ ಮಹಿಳಾ ರೋಗಿ ಅಪಾಯಕ್ಕೆ ಸಿಲುಕಬಹುದು ಎಂದು ಅರಿತ ಡಾ.ನಂದಕುಮಾರ್ ತಮ್ಮ ಕಾರನ್ನು ಬಿಟ್ಟು ಮೂರು ಕಿಲೋಮೀಟರ್ ದೂರ ಓಡಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ತಮ್ಮ ಓಟದ ಸಣ್ಣ ಕ್ಲಿಪ್ ಅನ್ನು ಸಹ ಪೋಸ್ಟ್ ಮಾಡಿದ್ದಾರೆ
View this post on Instagram
“ನಾನು ಪ್ರತಿ ದಿನ ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಮಣಿಪಾಲ್ ಆಸ್ಪತ್ರೆ, ಸರ್ಜಾಪುರಕ್ಕೆ ಪ್ರಯಾಣಿಸುತ್ತೇನೆ. ನಾನು ಶಸ್ತ್ರಚಿಕಿತ್ಸೆಗೆ ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ನನ್ನ ತಂಡವು ನಾನು ತಲುಪಿದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧವಾಗಿದೆ. ಟ್ರಾಫಿಕ್ ದಟ್ಟಣೆ ನೋಡಿ ನಾನು ಚಾಲಕನೊಂದಿಗೆ ಕಾರನ್ನು ಬಿಟ್ಟು ಆಸ್ಪತ್ರೆ ಕಡೆಗೆ ಓಡಿದೆ” ಎಂದಿದ್ದಾರೆ.
ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಿದ ವೈದ್ಯ ರೋಗಿಯ ಪ್ರಾಣ ಉಳಿಸಿದ್ದಾರೆ.
BREAKING NEWS : ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ
Video: ಅನನುಭವಿ ತಾಲಿಬಾನ್ ಪೈಲಟ್ನಿಂದ ಅಮೆರಿಕನ್ ಬ್ಲ್ಯಾಕ್ ಹಾಕ್ ಚಾಪರ್ ಪತನ, ಮೂವರು ಸಾವು
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಗೃಹರಕ್ಷಕರ ಸ್ವಯಂ ಸೇವಕ ಹುದ್ದೆಗೆ ಸಲ್ಲಿಸುವ ಅರ್ಜಿ ಅವಧಿ ವಿಸ್ತರಣೆ