ಬೆಂಗಳೂರು : ಆತ ಯುವಕ ಯುವತಿಯರ ನಂಬರ್ ಸಂಗ್ರಹಿಸಿ ಬೇರೆ ಬೇರೆ ಸಿಮ್ ಕಾರ್ಡ್ ಬಳಸಿ ಹುಡುಗಿಯರ ಸರ್ವಿಸ್ ಬೇಕಾ ಎಂದು ಕರೆ ಮಾಡುತ್ತಿದ್ದ. ಅದೆ ರೀತಿ ಹುಡುಗಿಯರಿಗೂ ಕೂಡ ಕರೆ ಮಾಡಿ ಹುಡುಗರ ಸರ್ವಿಸ್ ಬೇಕಾ ಎಂದು ಕೇಳುತ್ತಿದ್ದ ಆಸಾಮಿಯನ್ನ ಇದೀಗ ಪೂರ್ವ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನ ಆನಂದ್ ಶರ್ಮಾ ಎಂದು ಹೇಳಲಾಗುತ್ತಿದೆ. ಒಬ್ಬೊಬ್ಬರಿಗೂ ಒಂದೊಂದು ನಂಬರ್ನಿಂದ ಕರೆ, ಮಸೇಜ್ ಮಾಡುತ್ತಿದ್ದ.ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕಾ ಎಂದು ಮೆಸೇಜ್, ಕರೆ ಮಾಡಿ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಪೂರ್ವ ವಿಭಾಗದ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸುಭಿ ಎಂಬಾಕೆಗೂ ಸರ್ವಿಸ್ ಬೇಕಾ?ಎಂದು ಕರೆ ಮಾಡಿದ್ದ ಆರೋಪಿ. ಬೇರೆ ಬೇರೆ ನಂಬರ್ಗಳಿಂದ ಪದೇಪದೆ ಕರೆ ಮಾಡಿ ಆರೋಪಿ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೂರ್ವ ವಿಭಾಗ ಸೆನ್ ಪೊಲೀಸರು, ಆರೋಪಿ ಬಳಸಿದ ಮೊಬೈಲ್ ನಂಬರ್, ಲೋಕೇಶನ್ ಟ್ರ್ಯಾಕ್ ಮಾಡಿ ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿಯನ್ನ ಬಂಧಿಸಿದ್ದಾರೆ.