ಬೆಂಗಳೂರು : ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ ವ್ಹಿಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಇದೀಗ ತಮಿಳುನಾಡಿನ ಹೊಸೂರಿನ ರಾಮನಗರದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಉಮೇಶ್ (20) ಮತ್ತು ಇಮ್ರಾನ್ (19) ಎನ್ನುವವರನ್ನು ಬಂಧಿಸಿದ್ದಾರೆ.
ಹೆದ್ದಾರಿಯಲ್ಲಿ ವ್ಹಿಲಿಂಗ್ ಮಾಡಿ ಇತರೆ ಸವಾರರಿಗೆ ಸಂಕಷ್ಟ ತಂದೊಡ್ಡಿದ್ದರು. ವ್ಹಿಲಿಂಗ್ ಮಾಡಿ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಸಾಮಾಜಿಕ ಜಾಲತಾಣದ ವಿಡಿಯೋ ಆಧಾರದಲ್ಲಿ ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಹೊಸೂರು ಟೌನ್ ಪೊಲೀಸರಿಂದ ವೀಲಿಂಗ್ ಪುಂಡರ ಬಂಧನವಾಗಿದೆ.