ಬೆಂಗಳೂರು : ನಾಯಿ ಬೊಗಳಿದೆ ಎಂದು ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ನಟಿ ಅನಿತಾ ಭಟ್ ಅವರೊಂದಿಗೆ ಕಿರಿಕ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಟಿ ಅನಿತಾ ಭಟ್ ಜೊತೆ ಹಲವು ಕಿಡಿಗೇಡಿಗಳು ಕಿರಿಕ್ ಮಾಡಿಕೊಂಡಿದ್ದು, ನಾಯಿ ಬೊಗಳಿದೆ ಎಂದು ಕೆಲವರು ಕಿರಿಕ್ ಮಾಡಿದ್ದಾರೆ. ಜಕ್ಕೂರು ಬಳಿ ತನ್ನ ಗೆಳತಿ ಜೊತೆ ಅನಿತಾ ಭಟ್ ಹೊರಟಿದ್ದರು. ನಾಯಿ ಹಿಡಿದುಕೊಂಡು ಅನಿತಾ ಭಟ್ ಹೋಗುತ್ತಿದ್ದ ಸಂದರ್ಭದಲ್ಲಿ ಈ ವೇಳೆ ನಾಯಿ ಬೊಗಳಿದೆ ಎಂದು ಕೆಲವರು ನಟಿಯ ಜೊತೆ ಕಿರಿಕ್ ಮಾಡಿದ್ದಾರೆ ಎಂದಲಾಗುತ್ತಿದೆ.
ಈ ವೇಳೆ ಅನಿತಾ ಭಟ್ ಕ್ಷಮೆ ಕೇಳಿದರೂ ಕೂಡ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಅನಿತಾ ಭಟ್ ಆರೋಪಿಸಿದ್ದಾರೆ.ಈ ವೇಳೆ ಕಾರಿನ ಗಾಜುಗಳನ್ನು ಒಡೆಯಲು ಯತ್ನಿಸಿದ್ದಾಗಿ ನಟಿ ಅನಿತಾ ಭಟ್ ಆರೋಪಿಸಿದ್ದಾರೆ. ಘಟನೆ ಕುರಿತಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.