ಬೆಂಗಳೂರು : ಇತ್ತೀಚಿಗೆ ಹೃದಯಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಕಾರಿನಲ್ಲಿ ಮಲಗಿಕೊಂಡಿದ್ದಾಗಲೇ ಉದ್ಯಮಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋಡಿಗೆಹಳ್ಳಿಯ ಮಾನಸ್ ಆಸ್ಪತ್ರೆಯ ಬಳಿ ನಡೆದಿದೆ.
ಹೌದು ಕೋಡಿಗೆಹಳ್ಳಿಯ ಮಾನಸ್ ಆಸ್ಪತ್ರೆಯ ಬಳಿ ಕಾರಿನಲ್ಲಿ ಉದ್ಯಮಿ ಅಶ್ವಿನ್ ಕುಮಾರ್ (42) ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಹೃದಯಘಾತದಿಂದ ಉದ್ಯಮಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ನಿನ್ನೆ ಬೆಳಿಗ್ಗೆ ಕೆಲಸದ ನಿಮಿತ್ಯ ಉದ್ಯಮಿ ಅಶ್ವಿನ್ ಕುಮಾರ್ ತೆರಳಿದ್ದರು. ಹಲವು ಬಾರಿ ಕರೆ ಮಾಡಿದರು ಅಶ್ವಿನ್ ಕುಮಾರ್ ಸಂಪರ್ಕಕ್ಕೆ ಸಿಗದೇ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಲೊಕೇಶನ್ ಪರಿಶೀಲನೆ ವೇಳೆ ಮಾನಸ ಆಸ್ಪತ್ರೆಯ ಬಳಿ ಇರುವುದು ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿದಾಗ ರಸ್ತೆ ಬದಿ ತನ್ನದೇ ಕಾರಿನಲ್ಲಿ ಉದ್ಯಮಿ ಶವವಾಗಿ ಪತ್ತೆಯಾಗಿದ್ದಾರೆ.ಡೋರ್ ಲಾಕ್ ಮಾಡಿಕೊಂಡು ಮಲಗಿರುವ ಸ್ಥಿತಿಯಲ್ಲಿದ್ದ ಉದ್ಯಮಿ ಪತ್ತೆಯಾಗಿದ್ದಾರೆ.
ಕೂಡಲೇ ಕಾರಿನ ಗ್ಲಾಸ್ ಒಡೆದು ಪಕ್ಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉದ್ಯಮಿ ಅಶ್ವಿನ್ ಕುಮಾರ್ ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಕುಟುಂಬಸ್ಥರಿಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.