ಬೆಂಗಳೂರು : ಹೃದಯಾಘಾತ ಎನ್ನುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಯಾವಾಗ ಯಾರಿಗೆ ಹೃದಯಾಘಾತ ಸಂಭವಿಸುತ್ತದೆಯೋ ಗೊತ್ತಿಲ್ಲ. ಇದೀಗ ಬಸ್ ಚಾಲನೆ ಮಾಡುತ್ತಿರುವಾಗಲೇ ಬಿಎಂಟಿಸಿ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ ಸೇರಿದಂತೆ 45 ಜನರ ಜೀವ ಉಳಿದಿದೆ.
ನಿನ್ನೆ ಮಧ್ಯಾಹ್ನ ಬೆಂಗಳೂರಿನ ಶಾಂತಿನಗರ ಡಬಲ್ ರೋಡ್ ಬಳಿ ಈ ಒಂದು ಘಟನೆ ನಡೆದಿದೆ. ಕೆ ಎ 51 ಎಜೆ 6905 ನಂಬರ್ ಬಸ್ ಡ್ರೈವರ್ ದಿನೇಶ್ ಅವರಿಗೆ ಚಾಲನೆ ಮಾಡುತ್ತಿರುವಾಗಲೇ ಹೃದಯಘಾತ ಸಂಭವಿಸಿದೆ. ಬಸ್ ನಿಧಾನಕ್ಕೆ ಚಲಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ಕೂಡಲೇ ಧಾವಿಸಿ ಬಸ್ ಚಾಲಕನನ್ನು ರಕ್ಷಿಸಿದ್ದಾರೆ.
ಹಲಸೂರಿನ ಟ್ರಾಫಿಕ್ ASI ರಘು ಹಾಗೂ ಕಾನ್ಸ್ಟೇಬಲ್ ಅವರ ಸಮಯ ಪ್ರಜ್ಞೆಯಿಂದ 45 ಜನರ ಪ್ರಾಣ ಉಳಿದಿದೆ.ಬಸ್ ನಲ್ಲಿ ಸುಮಾರು 45 ಜನ ಪ್ರಯಾಣಿಕರಿದ್ದರು. ಸಂಚಾರಿ ಪೊಲೀಸರ ಈ ಒಂದು ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿದೆ 45 ಜನರ ಜೀವ ಉಳಿದಿದೆ.