ಬೆಂಗಳೂರು : ಕಾರು ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರ ನಡುವೆ ಗಲಾಟೆ ಉಂಟಾಗಿ ಈ ವೇಳೆ ಅಣ್ಣನ ಕೈಯಲ್ಲಿದ್ದ ಪೆಟ್ರೋಲ್ ತಮ್ಮನ ಮೇಲೆ ಬಿದ್ದ ಪರಿಣಾಮವಾಗಿ ತಮ್ಮ ಸಾವನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಗೋಕರೆ ಗ್ರಾಮದಲ್ಲಿ ನಡೆದಿದೆ.
ಈ ಮಂತ್ರವನ್ನು 11 ಬಾರಿ ಹೇಳಿ ನೂರಕ್ಕೆ ನೂರರಷ್ಟು ನಂಬಿಕೆ ಇಟ್ಟು ಈ ಕೆಲಸ ಮಾಡಿದರೆ ಮಾತ್ರ ನಿಮಗೆ ಫಲ ದೊರೆಯುವುದು
ಜಗದೀಶ್ ಎನ್ನುವ ವ್ಯಕ್ತಿಯನ್ನು ಅಣ್ಣ ವೆಂಕಟೇಶ್ ಎನ್ನುವವ ಕೊಲೆ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಕೆರೆ ಗ್ರಾಮದಲ್ಲಿ ಕಾರು ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರ ನಡುವೆ ಗಲಾಟೆ ಉಂಟಾಗಿ ತಮ್ಮನನ್ನು ಕೊಲೆಗೈಯಲಾಗಿದೆ.
WATCH VIDEO: ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ‘ಯುವ ಸಮೃದ್ಧಿ ಮೇಳ’ಕ್ಕೆ ನೋಂದಣಿ ಮಾಡಲು ಈ ವಿಡಿಯೋ ನೋಡಿ!
ಮೂರು ದಿನಗಳ ಹಿಂದೆ ಕಾರು ಹಾಗೂ ಜಮೀನು ವಿಚಾರಕ್ಕೆ ಜಗಳ ನಡೆದಿತ್ತು ಎನ್ನಲಾಗುತ್ತಿದ್ದು ಅವಿಭಕ್ತ ಕುಟುಂಬ ಇದ್ದಾಗ ತಮ್ಮನ ಹೆಸರಿನಲ್ಲಿ ಕಾರು ಖರೀದಿಸಲಾಗಿತ್ತು.ಮದುವೆಯಾದ ಬಳಿಕ ಜಗದೀಶ್ ಹಾಗೂ ವೆಂಕಟೇಶ್ ಸಹೋದರರು ಬೇರೆ ಬೇರೆಯಾಗಿದ್ದರು.
ಕಲ್ಬುರ್ಗಿ: ‘ರಷ್ಯಾ ಗಡಿಯಿಂದ’ ಮಗ, ಸ್ನೇಹಿತರನ್ನು ಕರೆತರುವಂತೆ ಡಿಸಿ, ಸಚಿವರಿಗೆ ತಂದೆ ಪತ್ರ
ತಮ್ಮ ಜಗದೀಶ್ ಗೆ ಕಾರು ಕೊಡುವಂತೆ ಅಣ್ಣ ವೆಂಕಟೇಶ್ ಕೇಳಿದ್ದ ಕಾರು ತೆಗೆಯಲು ಬಿಡಲ್ಲವೆಂದು ಪೆಟ್ರೋಲ್ ಕೈಯಲ್ಲಿ ಹಿಡಿದು ಅಣ್ಣ ನಿಂತಿದ್ದ ಈ ವೇಳೆ ಕೈಯಲ್ಲಿದ್ದ ಪೆಟ್ರೋಲ್ ತಮ್ಮನ ಮೇಲೆ ಹಾಕಿದ ಪರಿಣಾಮ ಬೆಂಕಿ ಹೊತ್ತುಕೊಂಡು ಸಹೋದರ ಜಗದೀಶ್ ಗಂಭೀರವಾಗಿ ಗಾಯಗೊಂಡಿದ್ದ.
BREAKING : ಹಾಸನದಲ್ಲಿ ಗೃಹಿಣಿ ಅನುಮಾಸ್ಪದವಾಗಿ ಸಾವು : ಪತಿಯೆ ನೇಣು ಬಿಗಿದು ಕೊಲೆಗೈದಿರುವ ಆರೋಪ
ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ತಮ್ಮ ಜಗದೀಶ್ ಸಾವನಪ್ಪಿದ್ದಾನೆ. ಜಮೀನು ಭಾಗವಾಗುವವರೆಗೂ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಜಗದೀಶ್ ಕುಟುಂಬಸ್ಥರು ಇದೀಗ ಪಟ್ಟು ಹಿಡಿದಿದ್ದಾರೆ. ದೇವನಹಳ್ಳಿ ಠಾಣೆ ಪೋಲಿಸರಿಂದ ಇದೀಗ ಆರೋಪಿ ವೆಂಕಟೇಶನನ್ನು ಬಂಧಿಸಲಾಗಿದ್ದು ಪ್ರಕರಣ ದಾಖಲಾಗಿದೆ.