ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ. ಜನತೆಯು ನೂತನ ವರ್ಷದ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಈ ವೇಳೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋ ಸಂಚಾರ ಸೇವೆಯನ್ನು ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಬಿಎಂಟಿಸಿಯು, ಹೊಸ ವರ್ಷಾಚರಣೆಯ ಪ್ರಯುಕ್ತ ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಸ್ ಸೇವೆ ನೀಡಲಾಗುತ್ತಿದೆ. ಬಿಎಂಟಿಸಿ ಬಸ್ ಸೇವೆಯು ಪ್ರಮುಖ ಮಾರ್ಗಗಳಲ್ಲಿ ಮಾತ್ರ ಪ್ರಯಾಣಿಕರಿಗೆ ಲಭ್ಯವಿದೆ. ಒಟ್ಟು 50 ಅನುಸೂಚಿಗಳಲ್ಲಿ ಬಸ್ ಗಳು ಸಂಚರಿಸಲಿವೆ ಎಂದು ತಿಳಿಸಿದೆ.
ಇನ್ನೂ ಬೆಂಗಳೂರು ಜನತೆಯ ಹೊಸ ವರ್ಷಾಚರಣೆಯ ಪ್ರಯುಕ್ತ ನಮ್ಮ ಮೆಟ್ರೋ ಸಂಚಾರವನ್ನು ಕೂಡ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿಎಲ್ ( BMRCL ) ಮಾಹಿತಿ ನೀಡಿದ್ದು, ಹೊಸ ವರ್ಷದ ಆಚರಣೆಯ ( New Year Celebration 2023 ) ಸಂದರ್ಭದಲ್ಲಿ ಎಲ್ಲಾ ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸೇವೆಯನ್ನು ದಿನಾಂಕ 31-12-2022ರ ರಾತ್ರಿಯಿಂದ ದಿನಾಂಕ 01-01-2023ರ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಿರೋದಾಗಿ ತಿಳಿಸಿದೆ.
ಡಿಸೆಂಬರ್ 31 ರಾತ್ರಿ 15 ನಿಮಿಷಗಳಿಗೊಮ್ಮೆ ನಮ್ಮ ಮೆಟ್ರೋ ರೈಲುಗಳು ( Namma Metro Train ) ಸಂಚರಿಸಲಿದ್ದಾವೆ. ದಿನಾಂಕ 01-01-2023ರ ಮುಂಜಾನೆ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳ ಸಂಚಾರ ಬೈಯಪ್ಪನಹಳ್ಲಿ-1.35ಗಂಟೆಗೆ, ಕೆಂಗೇರಿ-1.25, ನಾಗಸಂದ್ರ-1.30 ಹಾಗೂ ರೇಷ್ಮೆ ಸಂಸ್ಥೆಯಿಂದ 1.25 ಗಂಟೆಗೆ ಹೊರಡಲಿದೆ ಎಂದಿದೆ.
ಇನ್ನೂ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ದಿನಾಂಕ 01-01-2023ರ ಮುಂಜಾನೆ 2 ಗಂಟೆಗೆ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ಮೆಟ್ರೋ ರೈಲು ಹೊರಡುತ್ತದೆ ಎಂದು ತಿಳಿಸಿದೆ.
ಮಂಡ್ಯದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಣಕಹಳೆ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ