ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಸೌಧ ಎಂಬುದಾಗಿಯೇ ಕರೆಯಲ್ಪಡುವಂತ ಬೆಂಗಳೂರಿನ ವಿಧಾನಸೌಧದ ಮುಂದೆಯೇ ಮಾಲೀಕನೊಬ್ಬ ತನ್ನ ಬೈಕಿಗೆ ಬೆಂಕಿ ಹಂಚಿರುವಂತ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವಂತ ವಿಧಾನಸೌಧದ ಮುಂಭಾಗದಲ್ಲೇ ವ್ಯಕ್ತಿಯೊಬ್ಬ ತನ್ನ ಎಲೆಕ್ಟ್ರಿಕ್ ಬೈಕಿಗೆ ಬೆಂಕಿ ಇಟ್ಟಿರುವಂತ ಘಟನೆ ನಡೆದಿದೆ. ಆರಂಭದಲ್ಲಿ ಇದು ಬಾಕಿ ಹಣ ಪಾವತಿಸೋದಕ್ಕೆ ಸಾಧ್ಯವಾಗದ ಕಾರಣಕ್ಕೆ ಎನ್ನಲಾಗಿತ್ತು. ಆದರೇ ಆ ಬಳಿಕ ಪೊಲೀಸರ ಮೇಲಿನಿಂದ ಮಾಲೀಕ ಎಲೆಕ್ಟ್ರಿಕ್ ಬೈಕಿಗೆ ಬೆಂಕಿ ಇಟ್ಟಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಕೆಲ ದಿನಗಳ ಹಿಂದೆ ಬೈಕ್ ಮಾಲೀಕ ಪೃಥ್ವಿ ಟ್ರಕ್ಕಿಂಗ್ ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆಯಲ್ಲಿ ಪೊಲೀಸರು ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಈ ಬೇಸರದಲ್ಲಿಯೇ ಪೃಥ್ವಿರಾಜ್ ಅವರು ಇಂದು ವಿಧಾನಸೌಧದ ಮುಂದೆಯೇ ತನ್ನ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಇದೀಗ ವಿಧಾನಸೌಧ ಠಾಣೆಯ ಪೊಲೀಸರು ಪೃಥ್ವಿರಾಜ್ ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
BIG UPDATE: ರಾಮೇಶ್ವರಂ ಕೆಫೆ ಮಾದರಿಯಲ್ಲೇ ಬೆಂಗಳೂರಲ್ಲಿ ನಿಗೂಢ ಸ್ಪೋಟ ಕೇಸ್: ಚಿಕಿತ್ಸೆ ಫಲಿಸದೇ ಓರ್ವ ಸಾವು
ರಾಜ್ಯದ ರೈತರೇ ಗಮನಿಸಿ : ‘PM KISAN’ ಹಣ ಜಮಾ ಆಗಲು ಕೂಡಲೇ `e-KYC’ ಮಾಡಿಸಿಕೊಳ್ಳಿ!