ಬೆಂಗಳೂರು : ಅಕ್ರಮ ಕಸದ ಡಂಪಿಂಗ್ ಸ್ಥಳದಲ್ಲಿ ಬೆಂಕಿ ತಗುಲಿದ ಪರಿಣಾಮ ದಟ್ಟ ಹೋಗೆ ಆವರಿಸಿದೆ. ಹೊಗೆಯಿಂದಾಗಿ ಉಸಿರಾಡಲು ತೊಂದರೆ ಅನುಭವಿಸಿ ಹೊಸಕೋಟೆ ತಾಲೂಕಿನ ಭುವನಹಳ್ಳಿ ಗ್ರಾಮದ ಮುನೇಗೌಡ (50) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಹೌದು ಅಕ್ರಮವಾಗಿ ಹಾಕಿದ್ದ ಗಾರ್ಬೇಜ್ ಹೊಗೆಗೆ ಮುನಿಗೌಡ ಎನ್ನುವ ವ್ಯಕ್ತಿಯ ಜೀವ ಹೋಗಿದೆ. ಮುನಿಗೌಡಗೆ ದಟ್ಟ ಹೊಗೆಯಿಂದ ದಿಢೀರ್ ಆಗಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಹೊಸಕೋಟೆ ತಾಲೂಕಿನ ಭುವನಹಳ್ಳಿ ಗ್ರಾಮದ ಮುನೇಗೌಡ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಸಾವನಪ್ಪಿರುವ ವ್ಯಕ್ತಿ ಎಂದು ತಿಳಿದುಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ನಾಲ್ಕು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಮುನೇಗೌಡ ಆಸ್ಪತ್ರೆಗೆ ದಾಖಲಾಗಿದ್ದರು. ಏಕಾಏಕಿ ಕಾಣಿಸಿಕೊಂಡ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇದೀಗ ಮುನೇಗೌಡ ಸಾವನಪ್ಪಿದ್ದಾರೆ.