Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

ಅಂದು ನಿರ್ಲಕ್ಷ್ಯಕ್ಕೊಳಗಾಗಿದ್ದರು, ಇಂದು ತಮಿಳುನಾಡು ವಿಧಾನಸಭೆಯ ಹಂಗಾಮಿ ಸ್ಪೀಕರ್! ಯಾರು ಈ ಕರುಪ್ಪಯ್ಯ?

BIG NEWS: ಬಂಧನದ ಅಸಿಂಧುತ್ವಕ್ಕೆ “ಕುಟುಂಬಕ್ಕೆ ಮಾಹಿತಿ ನೀಡಿಲ್ಲ” ಎಂಬ ಕಾರಣ ಸಾಕಾಗದು: ಹೈಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು : ಪರವಾನಗಿ ಪಡೆಯಲು ನಿರ್ಲಕ್ಷ್ಯವಹಿಸಿದ ಅನಧಿಕೃತ ಪಿಜಿಗಳಿಗೆ ಬಿಬಿಎಂಪಿ ಬೀಗ : ಮಾರ್ಗಸೂಚಿ ಪಾಲನೆ ಕಡ್ಡಾಯ!
KARNATAKA

ಬೆಂಗಳೂರು : ಪರವಾನಗಿ ಪಡೆಯಲು ನಿರ್ಲಕ್ಷ್ಯವಹಿಸಿದ ಅನಧಿಕೃತ ಪಿಜಿಗಳಿಗೆ ಬಿಬಿಎಂಪಿ ಬೀಗ : ಮಾರ್ಗಸೂಚಿ ಪಾಲನೆ ಕಡ್ಡಾಯ!

By ಸುರೇಶ್‌

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಪಿಜಿಯಲ್ಲಿ ಯುವತಿಯ ಭೀಕರ ಕೊಲೆಗೆ ಸಂಬಂಧಪಟ್ಟಂತೆ, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಉದ್ದಿಮೆ ಪರವಾನಗಿ ಪಡೆದು ನಡೆಯುತ್ತಿರುವ ಪೇಯಿಂಗ್ ಗೆಸ್ಟ್ ಸಂಖ್ಯೆಗಿಂತ (ಪಿಜಿ) ಹೆಚ್ಚು ಅನಧಿಕೃತ ಪಿಜಿಗಳು ಕಾರ್ಯಾಚರಣೆ ನಡೆಸುತ್ತಿವೆ. ಹಾಗಾಗಿ ಬಿಬಿಎಂಪಿ ಅನಧಿಕೃತ ಪಿಜಿಗಳಿಗೆ ಬೀಗ ಜಡಿದು ಇನ್ನು ಅಧಿಕೃತ ಪಿಜಿಗಳಿಗೆ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದು ಖಡಕ್ ಸೂಚನೆ ನೀಡಿದೆ.

ಬಿಬಿಎಂಪಿ ಕಾಯ್ದೆ ಪ್ರಕಾರ ನಗರದಲ್ಲಿ ಪಿಜಿಗಳನ್ನು ನಡೆಸಲು ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯ, ಆದರೆ ನಗರದಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ನಡೆಯುತ್ತಿರುವ ಪಿಜಿಗಳ ಸಂಖ್ಯೆಯೇ ಹೆಚ್ಚಾಗಿರುವುದು ಇದೀಗ ಬೆಳಕಿಗೆ ಬಂದಿದೆ.ಒಟ್ಟು 2,193 ಪಿಜಿಗಳು ಬಿಬಿಎಂಪಿ ಪರವಾನಗಿ ಪಡೆದು ನಡೆಸುತ್ತಿದ್ದರೆ 2,320 ಪಿಜಿಗಳು ಯಾವುದೇ ಅನುಮತಿ ಪಡೆಯದೇ ನಡೆಸಲಾಗುತ್ತಿದೆ. ಈ ಪೈಕಿ ಬೆಂಗಳೂರಿನ ಹೊರ ವಲಯಗಳಾದ ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ವಲಯ, ಪೂರ್ವ ವಲಯದಲ್ಲಿ ಅತ್ಯಧಿಕ ಸಂಖ್ಯೆಯ ಅನಧಿಕೃತ ಪಿಜಿಗಳಿವೆ.

ಮಾರ್ಗಸೂಚಿ ಬಿಡುಗಡೆ: ನಗರದಲ್ಲಿರುವ ಎಲ್ಲ ಪಿಜಿಗಳಿಗೆ ಬಿಬಿಎಂಪಿ ಎರಡು ತಿಂಗಳ ಹಿಂದೆ ಮಾರ್ಗಸೂಚಿ ನೀಡಿ ಪಾಲನೆ ಮಾಡುವಂತೆ ಸೂಚಿಸಿತ್ತು. ಈ ಪೈಕಿ ಅಧಿಕೃತ ಪಿಜಿಗಳ ಪೈಕಿ 1578 ಪಿಜಿಗಳು ಮಾರ್ಗಸೂಚಿ ಅನುಸಾರ ಕಾರ್ಯಾಚರಣೆ ನಡೆಸುತ್ತಿವೆ. 615 ಪಿಜಿಗಳಲ್ಲಿ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಈ ಪೈಕಿ 856 ಪಿಜಿಗಳಿಗೆ ಈವರೆಗೆ ನೋಟಿಸ್ ನೀಡಲಾಗಿದೆ. ಅನಧಿಕೃತ ಪಿಜಿಗಳ ಪೈಕಿ 1674 ಪಿಜಿಗಳು ಮಾರ್ಗಸೂಚಿ ಅನುಸರಿಸುತ್ತಿದ್ದರೆ, 646 ಪಿಜಿಗಳು ಮಾರ್ಗಸೂಚಿ ಪಾಲಿಸದಿರುವುದು ಕಂಡು ಬಂದಿದೆ. ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪಿಜಿಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ.

21 ಪಿಜಿ ಬಂದ್

ಬಿಬಿಎಂಪಿಯ ಮಾರ್ಗಸೂಚಿ ಅನುಸರಿಸದ 21 ಪಿಜಿಗಳನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಬಂದ್ ಮಾಡಿದ್ದಾರೆ. ಈ ಪೈಕಿ 1 ಅಧಿಕೃತ ವಾಗಿ ಪರವಾನಗಿ ಪಡೆದಿದ್ದು, ಉಳಿದ 20 ಪಿಜಿಗಳು ಅನಧಿಕೃಕವಾಗಿವೆ.

ಪಿಜಿಗಳಿಗೆ ಮಾರ್ಗಸೂಚಿಗಳು

1) ಪಿಜಿಗಳ ಪ್ರವೇಶ, ನಿರ್ಗಮನ ಮತ್ತು ಆವರಣಗಳ ಚಿತ್ರೀಕರಣಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ,

2) ಸಿಸಿಟಿವಿ ವಿಡಿಯೋ ಸಂರಕ್ಷಣೆ ಕಡ್ಡಾಯ. ಪ್ರತಿಯೊಬ್ಬ ವಾಸಿಗೆ ತಲಾ 70 ಚದರ ಅಡಿ ಕನಿಷ್ಠ ಜಾಗ ಇರಬೇಕು.

3) ಕಟ್ಟಡ ಲಭ್ಯವಿರುವ ಸೌಕರ್ಯಕ್ಕೆ ಅನುಗುಣವಾಗಿ ವಾಸಿಗಳ ಸಂಖ್ಯೆ ನಿಗದಿ ಪಡಿಸಬೇಕು.

4) ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡುವುದು. ಸ್ನಾನ ಗೃಹ ಮತ್ತು ಶೌಚಾಲಯಗಳ ಸೇವೆ ಒದಗಿಸಬೇಕು.

5) ಕಡ್ಡಾಯವಾಗಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪಿಜಿಗಳಲ್ಲಿ ಅಡುಗೆ ಮನೆ ಹೊಂದಿರಬೇಕು.

6) 3 ತಿಂಗಳ ಅವಧಿಯೊಳಗೆ ಎಫ್‌ಎಸ್‌ಎಸ್‌ಎಐನಿಂದ ಪರವಾನಗಿ ಪಡೆಯಬೇಕು.

7) ಪಿಜಿಗಳಲ್ಲಿ ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 1533, ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 101 ಪ್ರದರ್ಶಿಸುವುದು.

8) ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಇರಬೇಕು. ಪಿಜಿ ಮಾಲೀಕರು ಕಸವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿ ಮಾಡಬೇಕು.

Share. Facebook Twitter LinkedIn WhatsApp Email

Related Posts

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

2 Mins Read

ಡಿ ಸುಧಾಕರ್ ಅವರ ಸ್ಮರಣೆಗೆ ನೀರಾವರಿ ಯೋಜನೆಗೆ ಅವರ ಹೆಸರಿಡಲು ಆಲೋಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

2 Mins Read

SHOCKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಚಾಮರಾಜನಗರದಲ್ಲಿ ಪೋಷಕರ ಕಣ್ಣೆದುರೇ ಬಾಲಕಿ ಎಳೆದೊಯ್ದು ಕೊಂದ ಚಿರತೆ

1 Min Read
Recent News

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

ಅಂದು ನಿರ್ಲಕ್ಷ್ಯಕ್ಕೊಳಗಾಗಿದ್ದರು, ಇಂದು ತಮಿಳುನಾಡು ವಿಧಾನಸಭೆಯ ಹಂಗಾಮಿ ಸ್ಪೀಕರ್! ಯಾರು ಈ ಕರುಪ್ಪಯ್ಯ?

BIG NEWS: ಬಂಧನದ ಅಸಿಂಧುತ್ವಕ್ಕೆ “ಕುಟುಂಬಕ್ಕೆ ಮಾಹಿತಿ ನೀಡಿಲ್ಲ” ಎಂಬ ಕಾರಣ ಸಾಕಾಗದು: ಹೈಕೋರ್ಟ್ ಮಹತ್ವದ ತೀರ್ಪು

BREAKING: ಪೆರಂಬೂರ್ ಉಳಿಸಿಕೊಂಡು ತಿರುಚಿ ವಿಧಾನಸಭಾ ಕ್ಷೇತ್ರಕ್ಕೆ ತಮಿಳುನಾಡು ಸಿಎಂ ವಿಜಯ್ ರಾಜೀನಾಮೆ | Tamil Nadu CM Vijay Resigns

State News
KARNATAKA

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿಲ್ಲ. ಕೇರಳದಲ್ಲಿ ನಾವು ಗೆಲುವು ಸಾಧಿಸಿದ್ದೇವೆ ಮತ್ತು…

ಡಿ ಸುಧಾಕರ್ ಅವರ ಸ್ಮರಣೆಗೆ ನೀರಾವರಿ ಯೋಜನೆಗೆ ಅವರ ಹೆಸರಿಡಲು ಆಲೋಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

SHOCKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಚಾಮರಾಜನಗರದಲ್ಲಿ ಪೋಷಕರ ಕಣ್ಣೆದುರೇ ಬಾಲಕಿ ಎಳೆದೊಯ್ದು ಕೊಂದ ಚಿರತೆ

BREAKING: ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.