Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ನೆತನ್ಯಾಹು ಭವಿಷ್ಯ ಅಸ್ಪಷ್ಟ’ : ಇಸ್ರೇಲ್ ಪ್ರಧಾನಿ ಕಚೇರಿ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದ ಇರಾನ್!

02/03/2026 4:02 PM

BREAKING : ಇಸ್ರೇಲ್ ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಕಚೇರಿಯ ಮೇಲೆ ದಾಳಿ ; ಇರಾನ್’ನ IRGC ಹೇಳಿಕೆ!

02/03/2026 3:55 PM

BREAKING : 2025-26ನೇ ಸಾಲಿಗೆ ‘ಭವಿಷ್ಯ ನಿಧಿ(PF) ಬಡ್ಡಿದರ’ ಪ್ರಕಟ.!PF interest rate

02/03/2026 3:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು: BBMPಯಿಂದ ‘ಘನತ್ಯಾಜ್ಯ ನಿರ್ವಹಣೆ’ಗೆ ಮಾರ್ಗಸೂಚಿ ಪ್ರಕಟ : ಈ ನಿಯಮ ಪಾಲಿಸೋದು ಕಡ್ಡಾಯ!
KARNATAKA

ಬೆಂಗಳೂರು: BBMPಯಿಂದ ‘ಘನತ್ಯಾಜ್ಯ ನಿರ್ವಹಣೆ’ಗೆ ಮಾರ್ಗಸೂಚಿ ಪ್ರಕಟ : ಈ ನಿಯಮ ಪಾಲಿಸೋದು ಕಡ್ಡಾಯ!

By kannadanewsnow5712/10/2024 7:41 AM

ಬೆಂಗಳೂರು: ನಗರದಲ್ಲಿ ಮುಂಬರುವ ದಸರ ಹಾಗೂ ದೀಪಾವಳಿ ಹಬ್ಬದ ದಿನಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕುರಿತು ಮಾರ್ಗಸೂಚಿಯನ್ನು ಬಿಬಿಎಂಪಿಯಿಂದ ಪ್ರಕಟಿಸಲಾಗಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಸರ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ತ್ಯಾಜ್ಯ, ಉತ್ಪತ್ತಿಯಾಗುತ್ತದೆಂದು ಅಂದಾಜಿಸಲಾಗಿದ್ದು, ಹಬ್ಬದ ದಿನಗಳಂದು ಹಾಗೂ ನಂತರ ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಈ ಕೆಳಕಂಡಂತೆ ವಿಲೇವಾರಿ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ.

1. ಬಾಳೇಕಂದು, ಮಾವಿನ ಎಲೆ, ಹೂವು ಹಾಗೂ ಇತರೆ ಹಬ್ಬದ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ವಿಶೇಷವಾಗಿ ಮಾರುಕಟ್ಟೆಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡಲು ಅರಿವು ಮೂಡಿಸುವುದು.

2. ಮಾರುಕಟ್ಟೆಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬದ ಸಾಮಾನುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಏಕ ಬಳಕೆ ಪ್ಲಾಸ್ಟಿಕ್‌ಗಳನ್ನು ಬಳಸದಂತೆ ನಿಗಾವಹಿಸಲು ವಾರ್ಡ್‌ಗಳಲ್ಲಿ ಘನತ್ಯಾಜ್ಯ ಆರೋಗ್ಯ ಅಧಿಕಾರಿಗಳ ಮತ್ತು ಮಾರ್ಷಲ್‌ಗಳು ತಂಡಗಳನ್ನು ರಚಿಸಿಕೊಂಡು ದಿನಂಪ್ರತಿ ಪರಿವೀಕ್ಷಣೆ ಕೈಗೊಂಡು ಪ್ಲಾಸ್ಟಿಕ್ ಮಾರಾಟ / ಬಳಕೆದಾರರಿಗೆ ನಿಯಮಾನುಸಾರ ದಂಡ ವಿಧಿಸಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ಮರುಬಳಕೆಯಾಗದಂತೆ ಅಗತ್ಯ ಕ್ರಮವಹಿಸುವುದು.

3. ದಸರ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಉತ್ಪತ್ತಿಯಾಗುವ ಹೆಚ್ಚುವರಿ ತ್ಯಾಜ್ಯವನ್ನು ಅಂದಾಜಿಸಿ. ಸದರಿ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಗ್ರಹಿಸಿ, ವಿಲೇವಾರಿ ಮಾಡಲು ಅಗತ್ಯ ಕ್ರಮ ಪಹಿಸುವುದು.

4. ಬ್ಲಾಕ್‌ಸ್ಪಾಟ್‌(ಕಸ ಸುರಿಯುವ ಸ್ಥಳ)ಗಳಲ್ಲಿ ತ್ಯಾಜ್ಯ ಶೇಖರಣೆಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಶೇಷ ಗಮನ ಹರಿಸುವುದು ಹಾಗೂ ಮಾರುಕಟ್ಟೆಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗುವ ಬ್ಲಾಕ್ ಸ್ಪಾಟ್‌ ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕ್ರಮವಹಿಸುವುದು.

5. ಹಬ್ಬದ ಪ್ರಯುಕ್ತ ಮಾರುಕಟ್ಟೆಗಳು ಹಾಗೂ ಇತರೆ ಪ್ರದೇಶಗಳಲ್ಲಿ ಬಾಳೇಕಂದು, ಮಾವಿನ ಎಲೆ, ಹೂವು ಮತ್ತು ಇತರೆ ಹಸಿ ತ್ಯಾಜ್ಯವನ್ನು ಆದ್ಯತೆ ಮೇರೆಗೆ ವಾರ್ಡ್‌ಗಳಲ್ಲಿಯೇ ಹಸಿ / ತೋಟಗಾರಿಕೆ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಕಲ್ಪಿಸಿಕೊಂಡು ವಿಲೇವಾರಿ ಮಾಡುವುದು ಅಥವಾ ವಾರ್ಡ್‌ಗಳಲ್ಲಿ ವಿಕೇಂದ್ರೀಕೃತ ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳಿದ್ದಲ್ಲಿ ಅಲ್ಲಿಗೆ ವಿಲೇವಾರಿ ಮಾಡುವುದು.

6. ಹಬ್ಬದ ದಿನಗಳಂದು ಉತ್ಪತ್ತಿಯಾಗುವ ಬಾಳೇಕಂದು, ಮಾವಿನ ಎಲೆ ಹಾಗೂ ಇತರೆ ಹಸಿರು ತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಇರುವ ಶೆಡ್ಡರ್ಸ್ ಗಳಿಗೆ ವಿಲೇವಾರಿ ಮಾಡುವುದು.

ಮೇಲಿನ ನಿರ್ದೇಶನಗಳನ್ನು ಕಟ್ಟುನಿಟಾಗಿ ಪಾಲಿಸಿ ದಸರ ಹಾಗೂ ದೀಪಾವಳಿ ಹಬ್ಬದ ದಿನಗಳಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಗಿರಿ ನಾಥ್ ರವರು ಕಛೇರಿ ಆದೇಶದ ಮೂಲಕ ಸೂಚಿಸಿರುತ್ತಾರೆ.

Bengaluru: BBMP issues guidelines for solid waste management: It is mandatory to follow this rule ಬೆಂಗಳೂರು: BBMPಯಿಂದ ‘ಘನತ್ಯಾಜ್ಯ ನಿರ್ವಹಣೆ’ಗೆ ಮಾರ್ಗಸೂಚಿ ಪ್ರಕಟ : ಈ ನಿಯಮ ಪಾಲಿಸೋದು ಕಡ್ಡಾಯ!
Share. Facebook Twitter LinkedIn WhatsApp Email

Related Posts

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

02/03/2026 3:29 PM2 Mins Read

ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು: ಸಂಸದ ಬಸವರಾಜ ಬೊಮ್ಮಾಯಿ

02/03/2026 2:55 PM2 Mins Read

ಎಲ್ಲ ಸಮುದಾಯಗಳ ಜೊತೆ ಚರ್ಚಿಸಿ ಒಳ ಮೀಸಲಾತಿ ಪರಿಗಣಿಸಿ ನೇಮಕ ಮಾಡಲಿ: ಸಂಸದ ಬೊಮ್ಮಾಯಿ

02/03/2026 2:50 PM1 Min Read
Recent News

BREAKING : ‘ನೆತನ್ಯಾಹು ಭವಿಷ್ಯ ಅಸ್ಪಷ್ಟ’ : ಇಸ್ರೇಲ್ ಪ್ರಧಾನಿ ಕಚೇರಿ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದ ಇರಾನ್!

02/03/2026 4:02 PM

BREAKING : ಇಸ್ರೇಲ್ ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಕಚೇರಿಯ ಮೇಲೆ ದಾಳಿ ; ಇರಾನ್’ನ IRGC ಹೇಳಿಕೆ!

02/03/2026 3:55 PM

BREAKING : 2025-26ನೇ ಸಾಲಿಗೆ ‘ಭವಿಷ್ಯ ನಿಧಿ(PF) ಬಡ್ಡಿದರ’ ಪ್ರಕಟ.!PF interest rate

02/03/2026 3:30 PM

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

02/03/2026 3:29 PM
State News
KARNATAKA

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

By kannadanewsnow0902/03/2026 3:29 PM KARNATAKA 2 Mins Read

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ…

ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು: ಸಂಸದ ಬಸವರಾಜ ಬೊಮ್ಮಾಯಿ

02/03/2026 2:55 PM

ಎಲ್ಲ ಸಮುದಾಯಗಳ ಜೊತೆ ಚರ್ಚಿಸಿ ಒಳ ಮೀಸಲಾತಿ ಪರಿಗಣಿಸಿ ನೇಮಕ ಮಾಡಲಿ: ಸಂಸದ ಬೊಮ್ಮಾಯಿ

02/03/2026 2:50 PM

ಕರ್ನಾಟಕದ ಬಡತನ ಸೂಚ್ಯಂಕ : ಯಾದಗಿರಿ ನಂಬರ್ 1, ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಚೆಕ್ ಮಾಡಿಕೊಳ್ಳಿ !

02/03/2026 2:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.