ಬೆಂಗಳೂರು : ಇಂದು ಬೆಂಗಳೂರಿನ ಜಯನಗರದ 4ನೆ ಟಿ ಬ್ಲಾಕ್ ನಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಒಂದು ಬಿದ್ದಿತ್ತು. ಇವಳೇ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕನನ್ನು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ಇದೀಗ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರದ ಕೊಂಬೆ ಬಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಇದೀಗ ಸಾವನಪ್ಪಿದ್ದಾನೆ. ಘಟನೆ ನಡೆದ ತಕ್ಷಣ ಆತನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಾಲಕ ಖಲೀಲ್ ಕೊನೆಯುಸಿರುಳಿದಿದ್ದಾನೆ.
ಜಯನಗರದ 4ನೆ ಟೀ ಬ್ಲಾಕ್ ನಲ್ಲಿ ಇಂದು ಬೆಳಿಗ್ಗೆ ಈ ಒಂದು ಅವಘಡ ನಡೆದಿತ್ತು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿತ್ತು. ಆದರೆ ಆಟೋ ಚಾಲಕ ಖಲೀಲ್ ಗೆ ಗಂಭೀರವಾದ ಗಾಯಗಳಾಗಿದ್ದರಿಂದ ಕೊಡಲೇ ಆತನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇದೀಗ ಆಟೋ ಚಾಲಕ ಸಾವನಪ್ಪಿದ್ದಾನೆ.