ಬೆಂಗಳೂರು : ಹಳೆ ದ್ವೇಷದ ಹಿನ್ನೆಲೆಯಲ್ಲಿ ಆಟೋ ಚಾಲಕನೊಂದಿಗೆ ಗಲಾಟೆ ಮಾಡಿದ ರೌಡಿ ಒಬ್ಬ ಮಾರಕಾಸ್ತ್ರಗಳಿಂದ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಸಂಜಯ್ ನಗರದ ನಾಗಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಆಟೋ ಚಾಲಕನನ್ನು ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ (41) ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 11:00ಗೆ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದಲ್ಲಿ ಆಟೋ ಚಾಲಕ ಮೂರ್ತಿ ಹಾಗೂ ಸಚಿನ್ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದಿತ್ತು. ಇವಳೆ ಸಚಿನ್ ಫೋನ್ ಮಾಡಿ ಶರಣಪ್ಪನನ್ನು ಸ್ಥಳಕ್ಕೆ ಕರೆಸಿದನು. ಈ ಹಿಂದೆ ಶರಣಪ್ಪ ಹಾಗೂ ಮೂರ್ತಿಗೂ ಜಗಳವಾಗಿತ್ತು. ಇವರೆಲ್ಲರೂ ಒಂದೇ ಏರಿಯಾದವರು ಎಂದು ಹೇಳಲಾಗುತ್ತಿದೆ.
ಶರಣಪ್ಪ ಹಾಗೂ ಆಟೋ ಚಾಲಕ ಮೂರ್ತಿಗೂ ಹಳೆ ದ್ವೇಷ ಇತ್ತು. ಇದೇ ಸಮಯಕ್ಕೆ ಕಾಯುತ್ತಿದ್ದ ಶರಣಪ್ಪ ಜಗಳ ಮಾಡುತ್ತಾ ಡ್ಯಾಗರ್ನಿಂದ ಏಕಾಏಕಿ ಮೂರ್ತಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಸಚಿನ್ ಹಾಗೂ ಶರಣಪ್ಪ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಕುಡಿದಂತೆ ಸಂಜಯ್ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.