ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನ ಶಾಂತಿನಗರ ಆರ್ ಟಿ ಓ ಕಚೇರಿಗೆ ಆಟೋ ಹಾಗೂ ಚಾಲಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಘಟನೆ ನಡೆಯಿತು.
ಕರ್ನಾಟಕ ರಾಜ್ಯ ಖಾಸಗಿ ಚಾಲಕರ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಿನ ಶಾಂತಿನಗರದ ಆರ್ ಟಿ ಓ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಎಲೆಕ್ಟ್ರಾನಿಕ್ ಬೈಕ್, ಟ್ಯಾಕ್ಸಿಗೆ ಸರ್ಕಾರ ಅನುಮತಿ ಕೊಟ್ಟಿತ್ತು. ಮತ್ತೆ ಸರ್ಕಾರ ಅದನ್ನು ಹಿಂಪಡೆದಿತ್ತು. ಓಲಾ ಉಬರ್ ಅಥವಾ ಇತರೆ ಕಂಪನಿಗಳಾಗಿರಬಹುದು ಗ್ರಾಹಕರಿಂದ ದುಪ್ಪಟ್ಟು ಹಣ ಪಡೆದುಕೊಳ್ಳದಿದ್ದರು.
ಹೀಗಾಗಿ ಒಟ್ಟು ಐದು ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಫೆಬ್ರವರಿಯಲ್ಲಿರುವುದು ಜನವರಿ ಆಗಿರಬಹುದು ಎರಡು ಆದೇಶಗಳನ್ನು ಹೊರಡಿಸಿದೆ. ಆದರೆ ಅದನ್ನು ಇಂಪ್ಲಿಮೆಂಟ್ ಮಾಡುವುದಕ್ಕೆ ರಾಜ್ಯ ಅಧಿಕಾರಿಗಳು ಮುಂದಾಗಿಲ್ಲ. ಹಾಗಾಗಿ ಚಾಲಕರು ಆರ್‌ಟಿಓ ಕಚೇರಿ ಮುತ್ತಿಗೆ ಹಾಕಿ ಪೊಲೀಸರು ಮತ್ತು ಚಾಲಕರ ತಳ್ಳಟ,ನೂಕಾಟ ನಡೆಯಿತು.
ಶಾಂತಿನಗರದ ಆರ್ ಟಿ ಓ ಕಚೇರಿಗೆ ಚಾಲಕರ ಮುತ್ತಿಗೆ ಹಾಕಿದ್ದು, ಬಿಟಿಎಸ್ ರೋಡ್ ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು ಆಟೋ, ಕ್ಯಾಬ್ಗಳನ್ನು ತಂದು ಪ್ರೊಟೆಸ್ಟ್ ಮಾಡುತ್ತಿದ್ದಾರೆ. ಪೊಲೀಸರನ್ನು ತಳ್ಳಿ ಕಚೇರಿಗೆ ನುಗ್ಗಿ ದೊಡ್ಡ ಹೈಡ್ರಾಮ ನಡೆಸುತ್ತಿದ್ದಾರೆ. ಇವಳೇ ಕಚೇರಿಯಲ್ಲಿರುವ ಹಲವು ವಸ್ತುಗಳ ಕೂಡ ನಾಶವಾಗಿದೆ.