ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಹಿಳಾ ಪ್ರಯಾಣಿಕರೊಬ್ಬರಿಗೆ ಭದ್ರತಾ ಚೆಕ್ ಪಾಯಿಂಟ್ ನಲ್ಲಿ ಬಟ್ಟೆ ಬಿಚ್ಚುವಂತೆ ಬಲವಂತಪಡಿಸಲಾಗಿದೆ ಎಂದು ಆರೋಪಿಸಿದ್ದು, ಈ ಘಟನೆಯನ್ನು ‘ಅವಮಾನಕರ’ ಎಂದು ಬಣ್ಣಿಸಿದ್ದಾರೆ.
ಸಿದ್ದರಾಮಯ್ಯ ಬಳಸಿದ ಭಾಷೆ, ಅವರ ಘನತೆಗೆ ತಕ್ಕುದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ
ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನಲ್ಲಿ ತನಾಗದ ನೋವನ್ನು ವಿವರಿಸಿದ ಅವರು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಟ್ಟೆ ಬಿಚ್ಚಲು ಮಹಿಳೆಯ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ
ಟ್ವಿಟರ್ನಲ್ಲಿ ಭದ್ರತಾ ತಪಾಸಣೆ ನಡೆಸುವ ಸಿಬ್ಬಂದಿ ವಿರುದ್ಧ ಅವರು ಆರೋಪ ಮಾಡಿದ್ದರು. ಈ ಟ್ಟೀಟ್ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಇಂಟರ್ನೆಟ್ ಬಳಕೆದಾರರ ಗಮನವನ್ನು ಸೆಳೆಯಿತು. ಈ ವಿಷಯವನ್ನು ಭದ್ರತಾ ತಂಡಕ್ಕೆ ಕೇಳಲಾಗಿದೆ. ವಿಮಾನ ನಿಲ್ದಾಣವು ತಮ್ಮ ವಿಷಾದವನ್ನು ವ್ಯಕ್ತಪಡಿಸಿದೆ .
Hello @KrishaniGadhvi, we deeply regret the hassle caused and this should not have happened. We have highlighted this to our operations team and also escalated it to the security team managed by CISF (Central Industrial Security force) a Government sovereign. (1/2)
— BLR Airport (@BLRAirport) January 3, 2023
ಅಲ್ಲದೇ “ಹಲೋ @KrishaniGadhvi, ನಾವು ನಿಮಗೆ ಆದ ತೊಂದರೆಗೆ ತೀವ್ರ ವಿಷಾದಿಸುತ್ತೇವೆ ಮತ್ತು ಇದು ಸಂಭವಿಸಬಾರದಿತ್ತು. ನಾವು ಇದನ್ನು ನಮ್ಮ ಕಾರ್ಯಾಚರಣೆ ತಂಡಕ್ಕೆ ಎತ್ತಿ ನೀಡಿದ್ದೇವೆ ಮತ್ತು ಸರ್ಕಾರದ ಸಾರ್ವಭೌಮರಾದ ಸಿಐಎಸ್ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ನಿರ್ವಹಿಸುವ ಭದ್ರತಾ ತಂಡಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದು ಭರವಸೆ ನೀಡಿದ್ದಲ್ಲದೇ ನಮ್ಮ ತಂಡವು ನಿಮ್ಮೊಂದಿಗೆ ಶೀಘ್ರವಾಗಿ ಸಂಪರ್ಕ ಮಾಡಬೇಕಾಗಿದೆ ” ಎಂದು ಪ್ರತ್ಯೇಕ ಟ್ವೀಟ್ನಲ್ಲಿ ಬರೆದು ಕಳುಹಿಸಿದ್ದಾರೆ.
ಸಿದ್ದರಾಮಯ್ಯ ಬಳಸಿದ ಭಾಷೆ, ಅವರ ಘನತೆಗೆ ತಕ್ಕುದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ
ಈ ಬೆನ್ನಲ್ಲೆ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, “ಇದು ವಿಮಾನ ನಿಲ್ದಾಣ ಮತ್ತು ಅದರ ಭದ್ರತಾ ತಂಡಕ್ಕೆ ಒಳ್ಳೆಯದಲ್ಲ. ಭದ್ರತೆಯು ಪ್ರಧಾನವಾಗಿದೆ, ಆದರೆ ಜನರನ್ನು ಅವಮಾನಿಸಲು ಅದನ್ನು ಬಳಸಬೇಡಿ ಎಂದು ಬಳಕೆದಾರರು ಒತ್ತಾಯಿಸಿದ್ದಾರೆ.
ವಿಚಾರ ಮಾಡಿದ ಸಂದರ್ಭದಲ್ಲಿ ʼ ಕೃಷಾನಿ ಗಾಧ್ವಿ ಬ್ಯಾಡ್ಜ್ ಮತ್ತು ಮಣಿಗಳನ್ನು ಹೊಂದಿರುವ ಡೆನಿಮ್ ಜಾಕೆಟ್ ಧರಿಸಿದ್ದರು. CISF ಮಹಿಳಾ ಸಿಬ್ಬಂದಿ ಜಾಕೆಟ್ ಅನ್ನು ಸ್ಕ್ಯಾನರ್ನಲ್ಲಿ ಹಾಕುವ ಕಾರಣಕ್ಕೆ ಅವರನ್ನು ಪರದೆಯೊಳಗೆ ಕಳಿಸಿದ್ದಾರೆ. ಜಾಕೆಟ್ ತೆಗೆದುಕೊಳ್ಳಲು ಅವರು ಖುಷಿಯಿಂದ ಪರದೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಜಾಕೆಟ್ ತೆಗೆಯುವಂತೆ ಹೇಳಿದ್ದು, ಅವರಿಗೆ ಅಸಮಾಧಾನ ಉಂಟು ಮಾಡಿದೆ.
ಸಿದ್ದರಾಮಯ್ಯ ಬಳಸಿದ ಭಾಷೆ, ಅವರ ಘನತೆಗೆ ತಕ್ಕುದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ
ಈ ಕುರಿತಂತೆ ಆರೋಪ ಮಾಡಿದ ಕೃಷಾನಿ ಗಾಧ್ವಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ಸಹ ನೀಡಿಲ್ಲ. ಅವರ ಟ್ವಿಟರ್ ಖಾತೆ ಡಿಲಿಟ್ ಆಗಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ. ಟ್ವಿಟರ್ನಲ್ಲಿ ಭದ್ರತಾ ತಪಾಸಣೆ ನಡೆಸುವ ಸಿಬ್ಬಂದಿ ವಿರುದ್ಧ ಅವರು ಆರೋಪ ಮಾಡಿದ್ದರು. ಆದರೆ, ಕೃಷಾನಿ ಗಾಧ್ವಿ ಮಾಡಿರುವ ಆರೋಪ ಸುಳ್ಳೆಂದು ಇದೀಗ CISF ಮೂಲಗಳು ಸ್ಪಷ್ಟಪಡಿಸಿವೆ.
ಸಿದ್ದರಾಮಯ್ಯ ಬಳಸಿದ ಭಾಷೆ, ಅವರ ಘನತೆಗೆ ತಕ್ಕುದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ