ಬೆಂಗಳೂರು : ವ್ಯಕ್ತಿ ಒಬ್ಬ ಬೇರೊಬ್ಬರ ಪಾಸ್ಪೋರ್ಟ್ ಬಳಸಿಕೊಂಡು ದೆಹಲಿಗೆ ಪ್ರಯಾಣಿಸಲು ಯತಿಸುತ್ತಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರ ಅಭಿಮಾನದಲ್ಲಿ ನಡೆದಿದೆ ಈ ವೇಳೆ ತಕ್ಷಣ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ.
BREAKING : ‘PSI’ ನೇಮಕಾತಿ ಹಗರಣ ಕೇಸ್ : ಹೆಚ್ಚಿನ ತನಿಖೆಗಾಗಿ ‘SIT’ ರಚನೆಗೆ ರಾಜ್ಯ ಸರ್ಕಾರ ತೀರ್ಮಾನ
ಬಂಧಿತ ಆರೋಪಿಯನ್ನು ಶ್ರೇಯಸ್ ರಮಾನಂದ್ ಎಂದು ಹೇಳಲಾಗುತ್ತಿದ್ದು ಮಾರ್ಚ್ 12ರಂದು ಈತ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಈ ವೇಳೆ ಅಧಿಕಾರಿಯುಗಳು ಆತನ ಪಾಸ್ಪೋರ್ಟ್ ಪರಿಶೀಲನೆ ನಡೆಸಿದಾಗ ಪಾಸ್ಪೋರ್ಟ್ ಅಲ್ಲಿರುವ ಭಾವಚಿತ್ರಕ್ಕೂ ಆತನ ಮೂಲಕ ವ್ಯತ್ಯಾಸ ಕಂಡು ಬಂದಿದೆ.
‘ಬೂಟು’ ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ ‘MLC’ ಹೇಮಲತಾ ನಾಯಕ್ ಗುಡುಗು
ಇದರಿಂದ ಸಂಶಯಗೊಂಡ ಸಿಬ್ಬಂದಿ ಮತ್ತಷ್ಟು ಪರಿಶೀಲನೆ ಮಾಡಿದಾಗ ಆತ ಬೇರೊಬ್ಬರ ಪಾಸ್ಪೋರ್ಟ್ನಲ್ಲಿ ಪ್ರಯಾಣಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಆರೋಪಿ ರಮಾನಂದ ಉದ್ದೇಶಪೂರ್ವಕವಾಗಿಯೇ ಮತ್ತೊಬ್ಬರ ಹೆಸರಿನಲ್ಲಿರುವ ಪಾಸ್‌ಪೋರ್ಟ್ ಬಳಸಿಕೊಂಡು ಪ್ರಯಾಣ ಮಾಡಲು ಬಂದಿದ್ದ ಎಂದು ತಿಳಿದು ಬಂದಿದೆ. ಆತನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಕಲಂ 419 ಐಪಿಸಿ ಮತ್ತು ಕಲಂ 121 ಪಿಪಿ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.