ಬೆಂಗಳೂರು: 2 ವರ್ಷಗಳಿಗೊಮ್ಮೆ ಬೆಂಗಳೂರಿನ ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ನಡೆ ಯುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ಫೆ. 10ರಿಂದ 14ರವರೆಗೆ5 ದಿನಗಳಕಾಲ ನಡೆಯಲಿದೆ ಎಂದು ರಕಣಾ ಇಲಾಖೆ ಗುರುವಾರ ಘೋಷಿಸಿದೆ.
13 ರಕ್ಷಣಾ ಇಲಾಖೆ, ಎಚ್‌ಎಎಲ್, ಭಾರತೀಯ ವಾಯುಸೇನೆ, ಡಿಆರ್ ಡಿಒ, ನಾಗರಿಕ ವಿಮಾನ ಯಾನ ಸಚಿವಾಲಯಗಳು ಜಂಟಿಯಾಗಿ ಆಯೋ ಜಿಸುವ ಈ ಪ್ರದರ್ಶನದಲ್ಲಿ ದೇಶ-ವಿದೇಶಗಳ ವೈಮಾನಿಕ ಕ್ಷೇತ್ರದ ನೂರಾರು ಕಂಪನಿಗಳು ಭಾಗವಹಿಸುತ್ತವೆ ಎಂದು ತಿಳಿದುಬಂದಿದೆ.
ಯುದ್ಧ ವಿಮಾನ, ಹೆಲಿಕಾಪ್ಟರ್, ನಾಗರಿಕ ವಿಮಾನ, ಸಣ್ಣ ವಿಮಾನಗಳು, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು, ರಾಡಾರ್ ವ್ಯವಸ್ಥೆ ಸೇರಿ ದಂತೆ ರಕ್ಷಣಾ ವಲಯ ಮತ್ತು ನಾಗರಿಕ ವಿಮಾನ ಯಾನಕ್ಕೆ ಸಂಬಂಧಿಸಿದ ಉತ್ಪನ್ನಗಳು, ಬಿಡಿ ಭಾಗಗಳು, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ದಿಯ ಉತ್ಪನ್ನಗಳು ಪ್ರದರ್ಶನಕ್ಕೆ ಇರುತ್ತವೆ. ಏರೋ ಇಂಡಿಯಾದಲ್ಲಿ ಕಂಪನಿಗಳು ಭಾಗವಹಿಸಲು ಮತ್ತು ನಾಗರಿಕರು ಪ್ರದರ್ಶನ ವೀಕ್ಷಣೆಗೆ ನೋಂದಣಿ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ.