ಬೆಂಗಳೂರು : ಇತ್ತೀಚಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ 15 ದಿನಗಳ ಗಡವು ನೀಡಿದ್ದರು. ಕೂಡಲೆ ಎಚೆತ್ತ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಿದರು. ಆದರೆ ಇದೀಗ ತೆರೆದ ಮೋರಿಗೆ ಯುವಕನೊಬ್ಬ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ನಾಗವಾರದ ಗೋವಿಂದಪುರದಲ್ಲಿ ಘಟನೆ ನಡೆದಿದೆ.
ಹೌದು ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಆಯತಪ್ಪಿ ತೆರೆದ ಮೋರಿಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಬಿಬಿಎಂಪಿ ನಿರ್ಲಕ್ಷಕ್ಕೆ ಆಸ್ಪತ್ರೆಗೆ ಸೇರಿದ ಯುವಕ ಬಾಯಿ ತೆರೆದಿದ್ದ ಮೋರಿಗೆ ಬಿದ್ದು ಯುವ ಗಂಭೀರವಾಗಿ ಗಾಯಗೊಂಡಿದ್ದಾನೆ. ಚರಂಡಿ ಕಾಮಗಾರಿ ವೇಳೆ ಮುಚ್ಚಳ ಹಾಕದೆ ನಿರ್ಲಕ್ಷ ತೋರಿದ್ದಾರೆ.
ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಯುವಕ ಬಿದ್ದಿದ್ದಾನೆ. ಈ ವೇಳೆ ಯುವಕ ಬಿದ್ದ ರಭಸಕ್ಕೆ ಕಬ್ಬಿಣದ ಸರಳ ಚುಚ್ಚಿ ಯುವಕನಿಗೆ ತೀವ್ರವಾದ ಗಾಯವಾಗಿದೆ. ಯುವಕ ಸಯ್ಯದ್ ಜಾವೇದಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ನಾಗವಾರದ ಗೋವಿಂದಪುರದಲ್ಲಿ ಈ ಒಂದು ಘಟನೆ ನಡೆದಿದೆ. ಹಲವಡೆ ಹಳ್ಳ ತೆಗೆದು ಪಾಲಿಕೆ ಸಿಬ್ಬಂದಿ ಹಾಗೆ ಬಿಟ್ಟಿದ್ದಾರೆ ಎಂದು ಸ್ಥಳೀಯರು ಇದೀಗ ಬಿಬಿಎಂಪಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.