ಬೆಂಗಳೂರು : ಗೌರವಕ್ಕೆ ಧಕ್ಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇದೀಗ ಬೆಂಗಳೂರಿನ ಪರಸ್ ಗೊಯಲ್ಸ್ ಕಂಪನಿ ಮಾಲೀಕ ರೋಮನ್ ಪರಸ್ ವಿರುದ್ಧ ಪೀಣ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಹೌದು ಈ ಕುರಿತಂತೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಗೆ ಮಹಿಳೆ ದೂರು ಸಲ್ಲಿಸಿದ್ದಾರೆ. ರೋಮನ್ ಗೊಯಲ್ ವಿರುದ್ಧ ಮಹಿಳಾ ಉದ್ಯೋಗಿ ದೂರು ಸಲ್ಲಿಸಿದ್ದಾರೆ. ರೋಮನ್ ಗೋಯಲ್ ಪರಸ್ ಗೋಯಲ್ ಖಾಸಗಿ ಕಂಪನಿ ಮಾಲೀಕರು ಎಂದು ಹೇಳಲಾಗುತ್ತಿದೆ.
ಕಂಪನಿ ಮಾಲೀಕನ ವಿರುದ್ಧ ಕಿರುಕುಳದ ಆರೋಪದ ಅಡಿ ಇದೀಗ ಮಹಿಳೂರು ಸಲ್ಲಿಸಿದ್ದಾರೆ.ಕಂಪನಿ ಉದ್ಯೋಗಿ ಶುಭಾಂಗಿಣಿ ನಾಯರ್ ಎನ್ನುವರು ದೂರು ದಾಖಲಿಸಿದ್ದಾರೆ. ತನ್ನ ಮನೆಯ ಗೇಟ್ ಬಳಿ ಗಲಾಟೆ ಮಾಡುತ್ತಿದ್ದಾನೆಂದು ಆರೋಪಿಸಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.